×
Ad

ಮೂರು ಇಂಚು ಉದ್ದ ಆಗಲು ಹೊರಟ ಟೆಕ್ಕಿಯ ಕಥೆ ವ್ಯಥೆ !

Update: 2016-04-07 16:53 IST

ಹೈದರಾಬಾದ್ :ನಗರದ 23 ವರ್ಷದ ನಿಖಿಲ್ ರೆಡ್ಡಿ ಎಂಬ ಸಾಫ್ಟ್ ವೇರ್ ಇಂಜಿನಿಯರ್ ಯುವಕನಿಗೆ ಗ್ಲೋಬಲ್ ಹಾಸ್ಪಿಟಲ್ಸ್ ನಲ್ಲಿ ನಡೆಸಲಾದ ದೇಹದ ಎತ್ತರ ಹೆಚ್ಚಿಸುವ ವಿವಾದಾಸ್ಪದ ಶಸ್ತ್ರಕ್ರಿಯೆ ಪ್ರಕರಣದ ತನಿಖೆಯನ್ನು ಸ್ವಯಂ ಪ್ರೇರಣೆಯಿಂದ ಕೈಗೆತ್ತಿಕೊಂಡಿರುವತೆಲಂಗಣಾ ಸ್ಟೇಟ್ ಮೆಡಿಕಲ್ ಕೌನ್ಸಿಲ್ ಶಸ್ತ್ರಕ್ರಿಯೆ ನಡೆಸಿದ ವೈದ್ಯರಿಗೆ ಸಮ್ಮನ್ಸ್ ಕಳುಹಿಸಿದೆ.

ಈ ವೈದ್ಯರುಕೌನ್ಸಿಲ್ಲಿನ ನೀತಿ ಸಮಿತಿಯ ಮುಂದೆ ಎಪ್ರಿಲ್ 20ರಂದು ಹಾಜರಾಗಿ ಈ ಅಸಾಮಾನ್ಯ ಪ್ರಾಯೋಗಿಕ ಶಸ್ತ್ರಕ್ರಿಯೆಯನ್ನು ಯುವಕನೊಬ್ಬನ ಮೇಲೆ ನಡೆಸಿರುವ ಬಗ್ಗೆ ತಮ್ಮ ನಿಲುವನ್ನು ವ್ಯಕ್ತಪಡಿಸಬೇಕೆಂದು ಹೇಳಿದೆ.

ಶಸ್ತ್ರಕ್ರಿಯೆಗೊಳಗಾದ ಯುವಕಮೊದಲೇ ಸಾಕಷ್ಟು ಉದ್ದವಿರುವಾಗ ( 5 ಅಡಿ, 7 ಇಂಚು)ಅವನ ಉದ್ದವನ್ನು ಇನ್ನೂ ಮೂರು ಇಂಚುಗಳಿಗೆ ಹೆಚ್ಚಿಸಲು ಎಲುಬು ತಜ್ಞ ಜಿ ಚಂದ್ರಭೂಷಣ್ ನೇತೃತ್ವದ ವೈದ್ಯರು ಏಕೆಒಪ್ಪಿದರೆಂದು ವೈದ್ಯಕೀಯ ರಂಗದ ಹಲವರು ಪ್ರಶ್ನೆಗಳನ್ನು ಎತ್ತಿದ ತರುವಾಯಕೌನ್ಸಿಲ್ ಈ ಕ್ರಮ ಕೈಗೊಂಡಿದೆ.

ಶಸ್ತ್ರಕ್ರಿಯೆ ನಡೆಸಿದ ವೈದ್ಯರಪ್ರತಿಕ್ರಿಯೆಯ ಆಧಾರದಲ್ಲಿ ಕೌನ್ಸಿಲ್ ತನ್ನ ನಿರ್ಧಾರ ಕೈಗೊಳ್ಳಲಿದೆಯೆಂದುಅದರ ಅಧ್ಯಕ್ಷ ಡಾ. ಈ. ರವೀಂದ್ರ ರೆಡ್ಡಿ ಹೇಳಿದ್ದಾರೆ.

ನಿಖಿಲ್ ತನ್ನ ಮನೆಯಿಂದ ಕಳೆದ ಶನಿವಾರದಿಂದ ಕಾಣೆಯಾಗಿರುವ ಹಿನ್ನೆಲೆಯಲ್ಲಿ ಆತನ ಹೆತ್ತವರು ಪೊಲೀಸ್ ದೂರು ನೀಡಿದ ನಂತರ ಆತನನ್ನು ಲಕಡಿಕಪುಲ್ ನಲ್ಲಿರುವ ಗ್ಲೋಬಲ್ ಆಸ್ಪತ್ರೆಯಲ್ಲಿ ಪತ್ತೆ ಹಚ್ಚಲಾಗಿತ್ತು. ರೂ 7 ಲಕ್ಷ ಮೌಲ್ಯದ ಈ ಶಸ್ತ್ರಕ್ರಿಯೆಗೆ ನಿಖಿಲ್ ರೂ 3 ಲಕ್ಷ ಪಾವತಿಸಿದ್ದು ಆತನ ಸ್ನೇಹಿತನೊಬ್ಬ ಶಸ್ತ್ರಕ್ರಿಯೆಗೆ ಸಂಬಂಧಿಸಿದ ಅರ್ಜಿಗೆ ಸಹಿ ಹಾಕಿದ್ದ.

ಕೆಲವು ವರದಿಗಳ ಪ್ರಕಾರ ನಿಖಿಲ್‌ಗೆ ಇಲಿಝರೋವ್ ತಂತ್ರಜ್ಞಾನದ ಆಧಾರದಲ್ಲಿ ಶಸ್ತ್ರಕ್ರಿಯೆ ನಡೆಸಲಾಗಿದ್ದು ಇದರಂಗವಾಗಿ ಮೊಣಕಾಲು ಹಾಗೂ ಪಾದದ ನಡುವಿರುವ ಮೂಳೆಯನ್ನು ಎರಡು ಭಾಗವಾಗಿಸಿ ಮೂಳೆಗಳ ನಡುವೆ ಸಣ್ಣ ಅಂತರವಿಟ್ಟು ಮತ್ತೆ ಅಲ್ಲಿ ಮೂಳೆ ಬೆಳೆಯಲು ಅನುವು ಮಾಡಿಕೊಡಲಾಗುತ್ತದೆ.

ಡಾ. ಪಿ. ವಿಜಯಚಂದ್ರ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಓಯೆಸಿಸ್ ಪ್ಕಾರರ ಕಾಸ್ಮೆಟಿಕ್ ಕಾರಣಗಳಿಗಾಗಿ ಇಲಿಝರೋವ್ ತಂತ್ರಜ್ಞಾನವನ್ನು ಬಳಸಲಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News