ಹೃತಿಕ್ ರನ್ನು ಬಂಧಿಸಿ : ಕಂಗನಾ

Update: 2016-04-07 11:26 GMT

ಮುಂಬೈ , ಎ .7 : ತನ್ನ ವಿರುದ್ಧ ಆಕ್ಷೇಪಕಾರಿ ಚಿತ್ರಗಳನ್ನು ಹೃತಿಕ್ ರೋಶನ್ ಹಬ್ಬಿಸಿದ್ದಾರೆ ಎಂದು ಆರೋಪಿಸಿರುವ ನಟಿ ಕಂಗನಾ ರಣಾವತ್ ಅವರನ್ನು ಬಂಧಿಸಬೇಕು ಎಂದು ತಮ್ಮ ವಕೀಲರ ಮೂಲಕ ಮುಂಬೈ ಪೋಲಿಸ್ ಕಮಿಷನರ್ ಗೆ ಗುರುವಾರ ಪತ್ರ ಬರೆದಿದ್ದಾರೆ. 
" ಹೃತಿಕ್ ವಿರುದ್ಧ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವಂತೆ ನಾವು ಮುಂಬೈ ಪೋಲಿಸರನ್ನು ವಿನಂತಿಸಿದ್ದೇವೆ " ಎಂದು ಕಂಗನಾ ಅವರ ವಕೀಲ ರಿಝ್ವಾನ್ ಸಿದ್ದೀಕಿ ಹೇಳಿದ್ದಾರೆ. ಈಗಾಗಲೇ ತನ್ನ ಇಮೇಲ್ ಅನ್ನು ದುರ್ಬಳಕೆ ಮಾಡಲಾಗಿದೆ ಎಂದು ಹೃತಿಕ್ ನೀಡಿರುವ ದೂರನ್ನು ಸೈಬರ್ ಕ್ರೈಮ್ ವಿಭಾಗ ತನಿಖೆ ಮಾಡುತ್ತಿದೆ. ಅದು ಈಗ ಕಂಗನಾ ಅವರ ದೂರಿನ ಕುರಿತೂ ತನಿಖೆ ನಡೆಸಲಿದೆ. 
ಆದರೆ ಕಂಗನಾ ಪ್ರಕಾರ, ಹೃತಿಕ್ ಅವರ ಇಮೇಲ್ ಅನ್ನು ಖುದ್ದು ಹೃತಿಕ್ ಬಳಸಿದ್ದು ಎಲ್ಲ ಚಿತ್ರಗಳು ಹಾಗು ವೀಡಿಯೋಗಳನ್ನು ಅವರೇ ಪ್ರಸಾರ ಮಾಡಿದ್ದಾರೆ. ಈ ನಡುವೆ ಇಬ್ಬರೂ ಖ್ಯಾತ ನಟರು ಬಾಲಿಶವಾಗಿ ವರ್ತಿಸುತ್ತಿದ್ದಾರೆ ಎಂದು ಚಿತ್ರರಂಗದ ಹಿರಿಯರು ಹೇಳಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News