×
Ad

ಐರೋಪ್ಯ ಒಕ್ಕೂಟ ಪರ ಮತ ಹಾಕಿ ಬ್ರಿಟಿಶ್ ಯುವಜನರಿಗೆ ಕ್ಯಾಮರೂನ್ ಒತ್ತಾಯ

Update: 2016-04-07 19:26 IST

ಲಂಡನ್, ಎ. 7: ಐರೋಪ್ಯ ಒಕ್ಕೂಟದಲ್ಲಿ ಬ್ರಿಟನ್ ಉಳಿಯಬೇಕೇ ಬೇಡವೇ ಎಂಬ ಬಗ್ಗೆ ಜೂನ್ 23ರಂದು ನಡೆಯುವ ಜನಮತ ಗಣನೆಯಲ್ಲಿ ತಪ್ಪದೆ ಮತ ಹಾಕುವಂತೆ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಗುರುವಾರ ಯವ ಬ್ರಿಟಿಶರನ್ನು ಒತ್ತಾಯಿಸಿದ್ದಾರೆ.
ಒಕ್ಕೂಟದಿಂದ ಹೊರಬರುವುದರಿಂದ (ಬ್ರೆಕ್ಸಿಟ್- ಬ್ರಿಟನ್-ಎಕ್ಸಿಟ್‌ನ ಕಿರು ರೂಪ) ಬ್ರಿಟಿಶ್ ಯುವ ಜನರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಈ ವಿಷಯದಲ್ಲಿ ಒಟ್ಟಾರೆ ಜನಾಭಿಪ್ರಾಯ ಸರಿಸಮವಾಗಿ ಹಂಚಿಹೋಗಿದ್ದು, ಯುವ ಮತದಾರರು ಅಭಿಪ್ರಾಯದ ದಿಕ್ಕನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಯುವಜನರು ಒಟ್ಟಾರೆಯಾಗಿ ಐರೋಪ್ಯ ಒಕ್ಕೂಟದ ಪರವಾಗಿದ್ದಾರೆ, ಆದರೆ ಮತದಾನ ಮಾಡುವ ಬಗ್ಗೆ ಹೆಚ್ಚಿನ ಒಲವು ಹೊಂದಿಲ್ಲ ಎನ್ನುವುದು ಸಮೀಕ್ಷೆಯಿಂದ ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News