ಬೇರೆಯವರು ಸೇದಿ ಬಿಟ್ಟ ಹೊಗೆಯಿಂದ ಅಸ್ತಮಕ್ಕೆ ಒಳಗಾಗುವ ಭಾರತೀಯರು
ಟೊರಾಂಟೊ, ಎ. 7: ಭಾರತ ಮತ್ತು ಬಾಂಗ್ಲಾದೇಶ ಮುಂತಾದ ಪುರುಷರು ಹೊಗೆಬತ್ತಿ ಸೇವಿಸುವ ಪ್ರಮಾಣ ಹೆಚ್ಚಿರುವ ದೇಶಗಳಲ್ಲಿ ಅಸ್ತಮ ಮತ್ತು ಉಬ್ಬಸ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿರುತ್ತದೆ. ಯಾಕೆಂದರೆ, ಈ ದೇಶಗಳಲ್ಲಿ ಬೇರೆಯವರು ಸೇದಿಬಿಟ್ಟ ಹೊಗೆಯನ್ನು ಅನಿವಾರ್ಯವಾಗಿ ಸೇದುವವರ ಸಂಖ್ಯೆಯೂ ಹೆಚ್ಚಾಗಿದೆ.
ಇದನ್ನು ಹೇಳಿದವರು ಕೆನಡ ದೇಶದ ಟೊರಾಂಟೊದ ಸೇಂಟ್ ಮೈಕಲ್ ಆಸ್ಪತ್ರೆಯ ಜಾಗತಿಕ ಆರೋಗ್ಯ ಸಂಶೋಧನಾ ಕೇಂದ್ರದಲ್ಲಿ ಸಾಂಕ್ರಾಮಿಕ ರೋಗಗಳ ಅಧ್ಯಯನಕಾರರಾಗಿರುವ ಜಯದೀಪ್ ಪಾತ್ರ.
‘‘ಇತ್ತೀಚಿನ ವರ್ಷಗಳಲ್ಲಿ, ಅಸ್ತಮ ಮುಂತಾದ ಅಸಾಂಕ್ರಾಮಿಕ ಶ್ವಾಸಕೋಶದ ಕಾಯಿಲೆಗಳ ಹೆಚ್ಚುತ್ತಿರುವ ಆರೋಗ್ಯ ಮತ್ತು ಆರ್ಥಿಕ ಹೊರೆ ಸಾರ್ವಜನಿಕ ಆರೋಗ್ಯಕ್ಕೆ ಬೃಹತ್ ಸವಾಲು ಒಡ್ಡಿವೆ’’ ಎಂದು ಪಾತ್ರ ಹೇಳುತ್ತಾರೆ.
‘‘ಕಡಿಮೆ ಆದಾಯದ ದೇಶಗಳಲ್ಲಿ ವಾಯು ಮಾಲಿನ್ಯದ ಪ್ರಭಾವಕ್ಕೆ ಒಳಗಾಗುವುದು ಅಥವಾ ಬೇರೆಯವರು ಸೇದಿ ಬಿಟ್ಟ ಹೊಗೆಯನ್ನು ಸೇದುವುದು ಅಸ್ತಮ ಮತ್ತು ಶ್ವಾಸಕೋಶದ ಕಾಯಿಲೆಗಳ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಲು ಕಾರಣಗಳಾಗಿವೆ’’ ಎಂದರು.
ಅದೇ ವೇಳೆ, ಹೊಗೆಬತ್ತಿ ಸೇದುವ ಮತ್ತು ಮದ್ಯಪಾನ ಮಾಡುವ ಮಹಿಳೆಯರು ಅಸ್ತಮಕ್ಕೆ ಈಡಾಗುವ ಸಾಧ್ಯತೆ ಇವೆರಡರಿಂದ ದೂರವಿರುವ ಮಹಿಳೆಯರಿಗಿಂತ ಎರಡು ಪಟ್ಟು ಹೆಚ್ಚು ಎಂಬುದಾಗಿಯೂ ಅಧ್ಯಯನ ಹೇಳಿದೆ.