ಭಾರತದ ಜೊತೆಗಿನ ಶಾಂತಿ ಮಾತುಕತೆ ಸ್ಥಗಿತವಾಗಿದೆ: ಪಾಕ್ ಹೈ ಕಮಿಷನರ್ ಅಬ್ದುಲ್ ಬಾಸಿತ್

Update: 2016-04-07 15:44 GMT

ಹೊಸದಿಲ್ಲಿ, ಎ.7: ಭಾರತದೊಂದಿಗಿನ ಶಾಂತಿ ಮಾತುಕತೆಯನ್ನು ಪಾಕಿಸ್ತಾನವು ಗುರುವಾರ ಅಮಾನತುಗೊಳಸಿದೆ. ಇದರಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ‘ಪಾಕಿಸ್ತಾನ ನೀತಿಗೆ’ ಭಾರೀ ಹಿನ್ನಡೆಯಾಗಿದೆ.
ದಿಲ್ಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಪಾಕಿಸ್ತಾನಿ ರಾಯಭಾರಿ ಅಬ್ದುಲ್ ಬಾಸಿತ್, ಸದ್ಯ ಭಾರತ-ಪಾಕಿಸ್ತಾನಗಳ ನಡುವಿನ ಶಾಂತಿ ಪಕ್ರಿಯೆಯನ್ನು ಅಮಾನತುಗೊಳಿಸಲಾಗಿದೆಯೆಂದು ತಾನು ಭಾವಿಸುತ್ತೇನೆ ಎಂದರು.
ಜೆಶೆ ಮುಹಮ್ಮದ್ ನಾಯಕ ಮಸೂದ್ ಅಝರ್‌ಗೆ ನಿಷೇಧ ವಿಧಿಸುವ ಭಾರತದ ಪ್ರಯತ್ನಕ್ಕೆ ಚೀನ ಅಡ್ಡಗಾಲು ಹಾಕಿದುದನ್ನು ಬೆಂಬಲಿಸಿದ ಅವರು, ತಾನು ಚೀನದ ಅಭಿಪ್ರಾಯಕ್ಕೆ ಸಹಮತ ಹೊಂದಿದ್ದೇನೆಂದು ಹೇಳಿದರು.
ಪಾಕಿಸ್ತಾನದಲ್ಲಿ ಇತ್ತೀಚೆಗೆ ಕುಲಭೂಷಣ ಯಾದವ್‌ರ ಬಂಧನವು, ಪಾಕಿಸ್ತಾನವು ಏನನ್ನು ಹೇಳುತ್ತ ಬಂದಿದೆಯೇ ಅದರೊಂದಿಗೆ ನಿರಾಕರಿಸಲಾಗದಷ್ಟು ತಾಳೆಯಾಗುತ್ತಿದೆ. ಪಾಕಿಸ್ತಾನದಲ್ಲಿ ಅಶಾಂತಿ ಸೃಷ್ಟಿಸುತ್ತಿರುವವರು ಹಾಗೂ ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವವ ಬಗ್ಗೆ ತಮಗೆಲ್ಲರಿಗೂ ಗೊತ್ತಿದೆ. ಆದರೆ, ಪಾಕಿಸ್ತಾನ ವಿರೋಧಿ ಬುಡಮೇಲು ಕೃತ್ಯಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಪಾಕಿಸ್ತಾನದ ಜನರು ಒಗ್ಗಟ್ಟಾಗಿರುವುದರಿಂದ ಅವರು ಅದರಲ್ಲಿ ವಿಫಲರಾಲಿದ್ದಾರೆಂದು ಬಾಸಿತ್ ಪ್ರತಿಪಾದಿಸಿದರು.
ಪಠಾಣ್‌ಕೋಟ್ ಭಯೋತ್ಪಾದಕ ದಾಳಿಯ ತನಿಖೆಗೆ ಎನ್‌ಐಎ ತಂಡದ ಪಾಕಿಸ್ತಾನ ಭೇಟಿಯ ಸಾಧ್ಯತೆಯನ್ನು ಅವರು ತಳ್ಳಿ ಹಾಕಿದರು.
ಪಾಕಿಸ್ತಾನದ ಜೆಐಟಿಯು ಇತ್ತೀಚಿನ ಭೇಟಿ ಎಂದೂ ಪ್ರತಿಭೇಟಿಯ ಕುರಿತು ಆಗಿರಲಿಲ್ಲವೆಂದು ಬಾಸಿತ್ ಹೇಳಿದರು.
ಇದು, ಭೇಟಿಗೆ ಪ್ರತಿಭಟಿಯ ಕುರಿತಾದುದಾಗಿರಲಿಲ್ಲ. ಆದರೆ, ಎರಡೂ ದೇಶಗಳ ನಡುವಿನ ಸಹಕಾರದ ಕುರಿತಾಗಿತ್ತು. ಆದುದರಿಂದ ಮುಕ್ತ ಹಾಗೂ ನ್ಯಾಯ ಸಮ್ಮತ ನಿರ್ಣಯವೊಂದು ಅಗತ್ಯವಾಗಿದೆ. ತಮ್ಮ ಪ್ರತಿನಿಧಿಗಳು ಅದನ್ನು ಹಿಂದಕ್ಕಿರಿಸುವ ಪ್ರಯತ್ನ ಮಾಡಿದರೆ ಅದು ಅನುತ್ಪಾದಕವಾಗುತ್ತದೆಂದು ಅವರು ತಿಳಿಸಿದರು.
ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ನಡುವೆ ಯಾವುದೇ ಸಭೆ ನಿಗದಿಯಾಗಿಲ್ಲವೆಂದು ಬಾಸಿತ್ ಸ್ಟಷ್ಟಪಡಿಸಿದರು.
ಪಾಕಿಸ್ತಾದೊಂದಿಗೆ ದ್ವಿಪಕ್ಷೀಯ ಸಂಬಂಧ ವೃದ್ಧಿಸಲು ಪ್ರಧಾನಿ ನರೇಂದ್ರ ಮೋದಿ ಅನೇಕ ಪ್ರಯತ್ನವನ್ನು ನಡೆಸುತ್ತಿರುವಂತೆಯೇ ಅವರ ಈ ಹೇಳಿಕೆ ಹೊರ ಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News