×
Ad

ಹೀಗೆ ಇದೇ ಮೊದಲು : ವೈದ್ಯರ ಮೇಲೇ ಅಪನಂಬಿಕೆ ಮೂಡುವ ಪರಿಸ್ಥಿತಿ

Update: 2016-04-08 11:57 IST

ಲಂಡನ್, ಎ. 8 : ಹೊಟ್ಟೆಯ ಹರ್ನಿಯಾದಿಂದ ಬಳಲುತ್ತಿದ್ದ ಎಥೆಲ್ ಈಸ್ಟರ್ ಎಂಬ ಮಹಿಳೆಯೊಬ್ಬಳು ಹೌಸ್ಟನ್ ನಗರದ ಲಿಂಡನ್ ಬಿ ಜಾನ್ಸನ್ ಹಾಸ್ಪಿಟಲ್ ನ ಶಸ್ತ್ರಕ್ರಿಯೆ ಕೊಠಡಿಯಲ್ಲಿ ರಹಸ್ಯ ರೆಕಾರ್ಡರ್ ಒಂದನ್ನು ಅಳವಡಿಸಿ ತನಗೆ ಶಸ್ತ್ರಕ್ರಿಯೆ ಮಾಡಿದ ವೈದ್ಯರ ಸಂಭಾಷಣೆಯನ್ನು ದಾಖಲಿಸಿ ಅದನ್ನು ಈಗ ಬಹಿರಂಗ ಪಡಿಸಿ ಸಾಕಷ್ಟು ವಿವಾದವನ್ನೇ ಸೃಷ್ಟಿಸಿದ್ದಾಳೆ.

ಯುಎಸ್‌ಬಿ ಡ್ರೈವ್ ಸೈಜಿನ ಆಡಿಯೋ ರೆಕಾರ್ಡರ್‌ನ ಎಕ್ಸ್ಟೆನ್ಶನ್ ಗಳನ್ನು ಎಥೆಲ್ ತನ್ನ ಕೂದಲೊಂದಿಗೆ ಪೋಣಿಸಿ ಯಾರಿಗೂ ಗೊತ್ತಾಗದಂತೆ ಶಸ್ತ್ರಕ್ರಿಯೆ ಕೊಠಡಿಯಲ್ಲಿ ಮಲಗಿದ್ದಳು. ಆದರೆ ರೆಕಾರ್ಡರ್ ನಲ್ಲಿ ದಾಖಲಾದ ವೈದ್ಯರ ಸಂಭಾಷಣೆಯನ್ನು ಕೇಳಿ ಆಕೆ ದಂಗಾಗಿಯೇ ಬಿಟ್ಟಿದ್ದಳು.

‘‘ನಾನು ಶಸ್ತ್ರಕ್ರಿಯೆ ಕೊಠಡಿಯಿಂದ ಜೀವಂತವಾಗಿ ಹೊರಬರುವೆನೆಂಬುದರ ಬಗ್ಗೆ ನನಗೆ ಸಂಶಯವಿತ್ತು. ಹಾಗೇನಾದರೂ ಆಗಿದ್ದಲ್ಲಿ ನನ್ನ ಕುಟುಂಬಕ್ಕೆ ವಾಸ್ತವಾಂಶ ತಿಳಿಯಲಿ ಎಂದು ನಾನು ಹೀಗೆ ಮಾಡಿದ್ದೆ,’’ಎಂದು ಈಗ ಗುಣಮುಖಳಾಗಿರುವ ಎಥೆಲ್ ಹೇಳುತ್ತಾಳೆ.

ಮೊದಲು ವೈದ್ಯರನ್ನು ಭೇಟಿಯಾದಾಗ ಶಸ್ತ್ರಕ್ರಿಯೆಯನ್ನು ಎರಡು ವಾರಗಳ ನಂತರ ಮಾಡುವ ಎಂದು ಅವರು ಹೇಳಿದ್ದು ಎಥೆಲ್‌ಗೆ ಸರಿ ಕಂಡಿರಲಿಲ್ಲ. ಆದರೂ ಕೊನೆಗೆ ಒಂದು ತಿಂಗಳ ನಂತರ ಶಸ್ತ್ರಕ್ರಿಯೆ ನಿಗದಿಪಡಿಸಲಾಗಿತ್ತು.


ಶಸ್ತ್ರಕ್ರಿಯೆಯ ಸಂದರ್ಭ ವೈದ್ಯರು ಆಕೆಯ ಹೊಕ್ಕುಳದ ಬಗ್ಗೆ, ದೇಹದ ಬಗ್ಗೆ ಮಾಡಿದ ಆಡಿದ ಕೆಲವೊಂದು ಮಾತುಗಳು ಆಕೆಯನ್ನು ವಿಚಲಿತಗೊಳಿಸಿವೆ. ಆಕೆ ಮಾಡಿದ ರೆಕಾರ್ಡಿಂಗಿನ ಕೆಲವೊಂದು ಭಾಗಗಳನ್ನು ಆಕೆ ದಿ ಪೋಸ್ಟ್ ನೊಂದಿಗೆ ಹಂಚಿಕೊಂಡಿದ್ದಾರೆ.

ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಈ ಹಿಂಧೆ ಎಥೆಲ್ ಕೋಪಗೊಂಡು ತಾನು ವಕೀಲರನ್ನು ಸಂಪರ್ಕಿಸುವೆನೆಂದು ಹೇಳಿದ್ದು, ಆಕೆಯ ಹೊಕ್ಕುಳ ಬಗ್ಗೆ ಪ್ರತಿಕ್ರಿಯಿಸಿದ್ದು ಆಕೆಯನ್ನು ‘ಕ್ವೀನ್’ ‘ಪ್ರೆಶಿಯಸ್’ ಎಂದು ವಿವರಿಸಿದ್ದು, ಅನೆಸ್ತೆಶೀಯಾ ವೈದ್ಯರು ‘‘ನಾನು ಆಕೆಯನ್ನು ಮುಟ್ಟಬೇಕೆಂದು ನೀವು ಬಯಸುತ್ತೀರಾ?’’ಎಂದು ಕೇಳಿರುವುದು ಹಾಗೂ ಶಸ್ತ್ರಕ್ರಿಯೆ ನಡೆಸಿದ ವೈದ್ಯರು ‘‘ನನಗೆ ಆಕೆಯನ್ನು ಮುಟ್ಟುವುದು ಸಾಧ್ಯ,’’ ಎಂದು ಹೇಳಿರುವುದು, ‘‘ನಿಮ್ಮ ಬಳಿ ಫೊಟೋ ಇದೆಯೇ?’’ ಎಂದು ಸರ್ಜನ್ ಒಂದೆರಡು ಬಾರಿ ಕೇಳಿರುವುದು ಹಾಗೂ ಅನೆಸ್ತಿಶೀಯ ವೈದ್ಯರು ‘‘ನಾನು ಆ ಬಗ್ಗೆ ಯೋಚಿಸಿದ್ದೆ, ಆದರೆ ಹಾಗೆ ಮಾಡಿಲ್ಲ,’’ಎಂದು ಹೇಳಿರುವುದೆಲ್ಲಾ ದಾಖಲಾಗಿದೆ.


ತಾನು ರೆಕಾರ್ಡ್ ಮಾಡಿರುವ ವೈದ್ಯರ ಸಂಭಾಷಣೆಯನ್ನು ಪತ್ರದೊಂದಿಗೆ ಲಗತ್ತಿಸಿ ಎಥೆಲ್ ಆಸ್ಪತ್ರೆಗೆ ಕಳುಹಿಸಿದರೂ ಆಕೆಗೆ ಧನ್ಯವಾದ ತಿಳಿಸಿದ ಆಸ್ಪತ್ರೆ ಈ ಹಂತದಲ್ಲಿ ಯಾವುದೇ ಕ್ರಮ ಕೈಗೊಳ್ಳುವ ಅಗತ್ಯ ತನಗೆ ಕಾಣುತ್ತಿಲ್ಲವೆಂದು ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News