ಬಿಜೆಪಿ ಎಂದೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸದು! :ಶಂಕರಾಚಾರ್ಯ

Update: 2016-04-08 10:37 GMT

ಹರದ್ವಾರ, ಎಪ್ರಿಲ್.8: ಶಾರದಾ ಮತ್ತು ಜ್ಯೋತಿ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಬಿಜೆಪಿ ಎಂದೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸದು ಎಂದು ಹೇಳಿರುವುದಾಗಿ ವರದಿಯಾಗಿದೆ. ಎರಡು ವರ್ಷಗಳ ಕಾರ್ಯಾವಧಿಯಲ್ಲಿ ಮೋದಿಸರಕಾರ ರಾಮಲಲ್ಲಾನ ಮಂದಿರ ನಿರ್ಮಿಸುವ ಬಗ್ಗೆ ಏನೂ ಮಾಡಿಲ್ಲ. ಅಯೋಧ್ಯೆಯಲ್ಲಿ ಯಾವತ್ತೂ ಮಸೀದಿ ಇರಲಿಲ್ಲ. ಕೆಲವರು ರಾಜಕೀಯ ರೊಟ್ಟಿಯನ್ನು ಲಾಭಗಳಿಸಲಿಕ್ಕಾಗಿ ಮಸೀದಿಯ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ.

ಜಗದ್ಗುರು ಶಂಕರಾಚಾರ್ಯ ಹರಿದ್ವಾರದ ಕನಖಲದಲ್ಲಿರುವ ಶಂಕರಾಚಾರ್ಯ ಮಠದಲ್ಲಿ ಪತ್ರಕರ್ತರೊಂದಿಗೆ ಮಾತಾಡುತ್ತಾ ಅವರು ಹೀಗೆ ಹೇಳಿರುವುದಾಗಿ ವರದಿಗಳು ತಿಳಿಸಿವೆ. ಮಂದಿರದ ವಿಷಯದಲ್ಲಿ ಸ್ವಾರ್ಥಪೂರ್ಣ ರಾಜಕೀಯ ನಡೆಯುತ್ತಿದೆ. ಪ್ರಚಲಿತ ಕೇಂದ್ರ ಸರಕಾರ ಮಂದಿರದ ಹೆಸರು ಹೇಳಿ ಆಡಳಿತಕ್ಕೆ ಬಂದಿದೆ.ಕುರ್ಚಿಯಲ್ಲಿ ಕುಳಿತಕೂಡಲೇ ರಾಮನನ್ನು ಮರೆತಿದೆ ಎಂದು ಶಂಕರಾಚಾರ್ಯರು ಹೇಳಿದ್ದಾರೆ.

ಈಗ ಬಿಜೆಪಿಯ ಕಾರ್ಯಕಾಲದಲ್ಲಿಯೇ ಮಂದಿರ ನಿರ್ಮಾಣವಾಗಲಿದೆ ಎಂದು ಭ್ರಮೆ ಹರಡಲಾಗುತ್ತಿದೆ. ವಾಸ್ತವವೆಂದರೆ ಬಿಜೆಪಿ ಎಂದೂ ರಾಮಮಂದಿರ ನಿರ್ಮಿಸದು. ರಾಮ ಕೇವಲ ಪಕ್ಷದ ಹೆಸರಾಗಿದೆ. ಇಡೀ ವಿಶ್ವಕ್ಕೆ ಅವನ ಮೇಲೆ ಹಕ್ಕು ಇದೆ. ಮಂದಿರವನ್ನು ದೊಡ್ಡ ವಿದ್ವಾಂಸರು ಹಾಗೂ ಸಂತರು ಸೇರಿ ನಿರ್ಮಿಸುತ್ತೇವೆ ಎಂದು ಶಂಕರಾಚಾರ್ಯ ಹೇಳಿರುವುದಾಗಿ ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News