×
Ad

ಖೆಮ್ಕಾಗೆ ಮತ್ತೆ ವರ್ಗ; 25 ವರ್ಷಗಳಲ್ಲಿ 47ನೇ ವರ್ಗಾವಣೆ!

Update: 2016-04-08 16:36 IST

ಚಂಡೀಗಢ : ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಖೆಮ್ಕಾ ಅವರು ಮತ್ತೊಮ್ಮೆ ವರ್ಗಾವಣೆಗೊಂಡಿದ್ದಾರೆ. ಕಳೆದ 25 ವರ್ಷಗಳ ಸೇವಾವಧಿಯಲ್ಲಿ ಖೇಮ್ಕಾರ 47ನೇ ವರ್ಗಾವಣೆ ಇದಾಗಿದೆ. ಈ ಹಿಂದೆಪುರಾತತ್ವ ಹಾಗೂ ವಸ್ತು ಸಂಗ್ರಹಾಲಯ ಇಲಾಖೆಯಲ್ಲಿಸೇವೆಯಲ್ಲಿದ್ದ ಖೆಮ್ಕಾ ಅವರನ್ನು ಈಗವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.

ತಮ್ಮ ಹೊಸ ಪೋಸ್ಟಿಂಗ್ ಪಡೆದ ಕೂಡಲೇ ಖೇಮ್ಕಾ ಟ್ವೀಟ್ ಮಾಡಿದ್ದು ಹೀಗೆ ‘ನನ್ನ ಪ್ರಿನ್ಸಿಪಾಲ್ ಸೆಕ್ರಟರಿ ರ್ಯಾಂಕಿನಲ್ಲೇ ಪೋಸ್ಟಿಂಗ್ ಆರ್ಡರ್99 ದಿನ ವಿಳಂಬದ ನಂತರ ದೊರಕಿದೆ.’’

ಮಾರ್ಚ್ 30ರಂದು ಆವರ ಟ್ವೀಟ್ ಹೀಗಿತ್ತು- ‘‘ಕಳೆದ ಮೂರು ತಿಂಗಳುಗಳಿಂದ ಪದೋನ್ನತಿಗಾಗಿ ಕಾಯುತ್ತಿದ್ದೇನೆ. ಕೆಳಗಿನ ಹಂತದ ಹುದ್ದೆಯನ್ನು ಹೊಂದುವುದುಅವಮಾನಕಾರಿ. ಲೆಫ್ಟಿನೆಂಟ್ ಜನರಲ್ ಒಬ್ಬರು ಬ್ರಿಗೇಡಿಯರ್ಹುದ್ದೆಯನ್ನು ಹೊಂದಿದಂತೆ."

1991ರ ಬ್ಯಾಚಿನ ಅಧಿಕಾರಿಯಾಗಿರುವ ಖೆಮ್ಕಾ ಹರ್ಯಾಣಾ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿಈ ವರ್ಷದ ಜನವರಿಯಲ್ಲಿ ಪದೋನ್ನತಿಗೊಂಡಿದ್ದರು.

ಅಕ್ಟೋಬರ್ 2012ರಲ್ಲಿಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಹಾಗೂ ರಿಯಲ್ ಎಸ್ಟೇಟ್ ದೈತ್ಯ ಡಿಎಲ್‌ಎಫ್ ನಡುವಿನ ಭೂ ಒಪ್ಪಂದವೊಂದನ್ನು ರದ್ದುಗೊಳಿಸಿ ವಾದ್ರಾರ ವಿವಾದಿತ ಭೂ ವ್ಯವಹಾರಗಳ ತನಿಖೆಗೆ ಆದೇಶಿಸಿ ಸುದ್ದಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಚುನಾವಣಾ ರ್ಯಾಲಿಗಳಲ್ಲಿಯೂ ಖೇಮ್ಕಾ ಹೆಸರು ಉಲ್ಲೇಖಿಸಿದ್ದರು.

ಅವರ ಈ ಕ್ರಮದಿಂದಾಗಿ ಖೆಮ್ಕಾ ಭೂಪೀಂದರ್ ಸಿಂಗ್ ಹೂಡಾ ನೇತೃತ್ವದ ಸರಕಾರದ ಆಕ್ರೋಶಕ್ಕೂ ತುತ್ತಾಗಿದ್ದರು.

ಐಐಟಿ ಪದವೀಧರರಾಗಿರುವ ಖೆಮ್ಕಾಬಿಜೆಪಿ ಹರ್ಯಾಣಾದಲ್ಲಿ 2014ರಲ್ಲಿ ಅಧಿಕಾರಕ್ಕೆ ಬಂದಾಗ ಪ್ರಮುಖ ಹುದ್ದೆ ಪಡೆಯುವರೆಂದು ಅಂದಾಜಿಸಲಾಗಿತ್ತು. ಆದರೆ ಅವರನ್ನು ಮೊದಲು ಸಾರಿಗೆ ಇಲಾಖೆಗೆ ನೇಮಿಸಿ ನಂತರ ಪುರಾತತ್ವ ಹಾಗೂ ವಸ್ತುಸಂಗ್ರಹಾಲಯ ಇಲಾಖೆಗೆ ನೇಮಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News