ಬ್ರಿಟನ್‌ನ ವಿಲಿಯಂ ದಂಪತಿ ನಾಳೆ ಭಾರತಕ್ಕೆ
Update: 2016-04-08 19:52 IST
ಲಂಡನ್, ಎ. 8: ಬ್ರಿಟನ್ ರಾಜಕುಮಾರ ವಿಲಿಯಮ್ ಮತ್ತು ಅವರ ಹೆಂಡತಿ ಕೇಟ್ ರವಿವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ಪ್ರವಾಸದ ವೇಳೆ ಅವರು ಬಾಲಿವುಡ್‌ನ ತಾರೆಯರು ಮತ್ತು ಮುಂಬೈ ಕೊಳೆಗೇರಿಗಳ ಮಕ್ಕಳೊಂದಿಗೆ ಬೆರೆಯಲಿದ್ದಾರೆ. ಇದು ಉಪಖಂಡಕ್ಕೆ ರಾಜ ದಂಪತಿಯ ಪ್ರಥಮ ಭೇಟಿಯಾಗಿದ್ದು, ಪ್ರೇಮ ಸ್ಮಾರಕ ತಾಜ್‌ಮಹಲನ್ನು ಕಣ್ತುಂಬಿಕೊಳ್ಳಲಿದ್ದಾರೆ.
ಬಳಿಕ, ಕೇಂಬ್ರಿಜ್ ಡ್ಯೂಕ್ ಮತ್ತು ಡಚಿಸ್ (ವಿಲಿಯಮ್ ಮತ್ತು ಕೇಟ್) ಭೂತಾನ್‌ಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಭೂತಾನ್‌ನಲ್ಲಿ ದೊರೆ ಜಿಗ್ಮೆ ಖೇಸರ್ ನಮ್‌ಗ್ಯೆಲ್ ವಾಂಗ್ಚುಕ್ ಮತ್ತು ರಾಣಿ ಜೇಟ್ಸನ್ ಪೇಮಾಠನ್ನು ಭೇಟಿಯಾಗಲಿದ್ದಾರೆ.
‘‘ಭಾರತ ಮತ್ತು ಬ್ರಿಟನ್ ಹೊಂದಿರುವ ಪ್ರಗತಿಪರ ಸಂಬಂಧವನ್ನು ನಮ್ಮ ಪ್ರವಾಸ ಪ್ರತಿಫಲಿಸುತ್ತದೆ’’ ಎಂದು 33 ವರ್ಷದ ವಿಲಿಯಂ ಹೇಳಿದರು. ಅವರು ಬ್ರಿಟನ್‌ನ ಸಿಂಹಾಸನ ಏರುವವರ ಪಟ್ಟಿಯಲ್ಲಿ ಎರಡನೆ ಸ್ಥಾನದಲ್ಲಿದ್ದಾರೆ. ಪಟ್ಟಿಯಲ್ಲಿನ ಮೊದಲ ಹೆಸರು ಅವರ ತಂದೆ ಯುವರಾಜ ಚಾರ್ಲ್ಸ್.