ಐಸಿಸ್ ಕ್ಯಾನ್ಸರ್‌ನಂತೆ ಹರಡುತ್ತಿದೆ: ಮೂನ್
Update: 2016-04-08 20:56 IST
ಜಿನೇವ, ಎ. 8: ಸಿರಿಯ ಸಂಘರ್ಷ ಭಯೋತ್ಪಾದಕ ಗುಂಪುಗಳಿಗೆ ಬೆಳೆಯಲು ಅವಕಾಶ ನೀಡಿದೆ ಹಾಗೂ ಅವುಗಳು ಈಗ ಕ್ಯಾನ್ಸರ್‌ನಂತೆ ಹರಡುತ್ತಿವೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ಶುಕ್ರವಾರ ಹೇಳಿದ್ದಾರೆ.
‘‘ಸಿರಿಯ ಯುದ್ಧವು ಉಗ್ರಗಾಮಿ ಗುಂಪುಗಳ ವಂಶವೃದ್ಧಿಯ ನೆಲೆಯಂತಾಗಿದೆ. ಈಗ ಐಸಿಸ್ ಮತ್ತು ಇತರ ಉಗ್ರ ಗುಂಪುಗಳು ಜಗತ್ತಿನಾದ್ಯಂತ ಕ್ಯಾನ್ಸರ್‌ನಂತೆ ಹರಡುತ್ತಿವೆ’’ ಎಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೂನ್ ನುಡಿದರು.