ಐಪಿಎಲ್ ಅದ್ದೂರಿ ಉದ್ಘಾಟನೆ
ಮುಂಬೈ, ಎ.8: ಒಂಬತ್ತನೆ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಯ ಉದ್ಘಾಟನಾ ಸಮಾರಂಭ ಶುಕ್ರವಾರ ರಾತ್ರಿ ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಅದ್ದೂರಿಯಾಗಿ ನೆರವೇರಿತು.
ಬಾಲಿವುಡ್ ನಟಿ ಜಾಕ್ಲಿನ್ ಫೆರ್ನಾಂಡಿಸ್ ನೃತ್ಯದೊಂದಿಗೆ ಆರಂಭವಾದ ಐಪಿಎಲ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕತ್ರಿನಾ ಕೈಫ್ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿದರು. ವೆಸ್ಟ್‌ಇಂಡೀಸ್ ಆಲ್‌ರೌಂಡರ್ ಡ್ವೇಯ್ನ್ ಬ್ರಾವೊ ‘ಚಾಂಪಿಯನ್ ಡ್ಯಾನ್ಸ್’ ಮೂಲಕ ಕ್ರಿಕೆಟ್‌ಗಳ ಅಭಿಮಾನಿಗಳ ಗಮನ ಸೆಳದರು. ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಟೂರ್ನಿಯಲ್ಲಿ ಭಾಗವಹಿಸುತ್ತಿರುವ 8 ತಂಡಗಳ ನಾಯಕರಾದ ಝಹೀರ್ ಖಾನ್(ಡೆಲ್ಲಿ), ಸುರೇಶ್ ರೈನಾ(ಗುಜರಾತ್), ಡೇವಿಡ್ ಮಿಲ್ಲರ್(ಪಂಜಾಬ್), ಗೌತಮ್ ಗಂಭೀರ್(ಕೋಲ್ಕತಾ), ಎಂಎಸ್ ಧೋನಿ(ಪುಣೆ)ವಿರಾಟ್ ಕೊಹ್ಲಿ(ಆರ್‌ಸಿಬಿ), ಡೇವಿಡ್ ವಾರ್ನರ್(ಹೈದರಾಬಾದ್) ಹಾಗೂ ರೋಹಿತ್ ಶರ್ಮ(ಮುಂಬೈ) ಅವರನ್ನು ವೇದಿಕೆಗೆ ಆಹ್ವಾನಿಸಿದರು.
ನಾಯಕರು ವೇದಿಕೆ ಏರಿದ ತಕ್ಷಣ ಆಕಾಶದಲ್ಲಿ ಟ್ರೋಫಿ ಪ್ರತ್ಯಕ್ಷವಾಯಿತು. ಹಗ್ಗದ ಮೂಲಕ ಟ್ರೋಫಿ ಕೆಳಗೆ ಬಂದಾಗ ಹಾಲಿ ಚಾಂಪಿಯನ್ ಮುಂಬೈ ನಾಯಕ ರೋಹಿತ್ ಟ್ರೋಫಿಯನ್ನು ಬಾಚಿಕೊಂಡರು.