×
Ad

ಬಿಸಿಸಿಐ ಕಾರ್ಯವೈಖರಿ ಪಾರದರ್ಶಕವಾಗಿರಬೇಕು: ಸುಪ್ರೀಂ

Update: 2016-04-08 23:44 IST

ಹೊಸದಿಲ್ಲಿ, ಎ.8: ಬಿಸಿಸಿಐ ಕಾರ್ಯವೈಖರಿಯು ಪಾರದರ್ಶಕ ಹಾಗೂ ಕಣ್ಣಿಗೆ ಗೋಚರಿಸುವಂತಿರಬೇಕು ಎಂದು ಶುಕ್ರವಾರ ಸುಪ್ರೀಂಕೋರ್ಟ್ ಶುಕ್ರವಾರ ಆದೇಶಿಸಿದೆ.

ಬಿಸಿಸಿಐ ಜಸ್ಟೀಸ್ ಲೋಧಾ ಸಮಿತಿ ಶಿಫಾರಸು ಮಾಡಿರುವ ಕೆಲವು ಅಂಶಗಳನ್ನು ಹಾಗೂ ಸುಧಾರಣೆಗಳನ್ನು ಅನುಷ್ಠಾನಗೊಳಿಸಲು ನಿರಾಕರಿಸಿರುವ ಬಗ್ಗೆಯೂ ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿದೆ.

ನೀವು ಸಾರ್ವಜನಿಕ ಕಾರ್ಯಕ್ರಮವನ್ನು ಸರಿಯಾಗಿ ಮಾಡುತ್ತಿಲ್ಲ. ನಿಮ್ಮ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಅಗತ್ಯವಿದೆ.ನೀವು ಖರ್ಚು-ವೆಚ್ಚವನ್ನು ಪ್ರಶ್ನಿಸುವಂತಿಲ್ಲ ಎಂದು ಹೇಳುತ್ತೀರಿ. ನೀವು ಸಂಪಾದಿಸಿದ ಕೋಟ್ಯಂತರ ರೂಪಾಯಿ ಸಾರ್ವಜನಿಕರದ್ದು ಎಂಬುದು ನೆನಪಿರಲಿ ಎಂದು ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ಹಾಗೂ ಜಸ್ಟಿಸ್ ಫಕೀರ್ ಮುಹಮ್ಮದ್ ಇಬ್ರಾಹಿಂ ಕಲೀಫುಲ್ಲಾ ಅವರಿದ್ದ ದ್ವಿಸದಸ್ಯ ಪೀಠ ಹೇಳಿದೆ.

ಬಿಸಿಸಿಐ ಬಳಿಯಿರುವ ಸಾರ್ವಜನಿಕರ ಹಣವನ್ನು ಟ್ರಸ್ಟ್ ಮೂಲಕ ಕ್ರಿಕೆಟ್ ಬೆಳವಣಿಗೆಗೆ ಬಳಸುತ್ತಿದೆ ಎಂದು ಹಿರಿಯ ವಕೀಲ ವೇಣುಗೋಪಾಲ್ ಕೋರ್ಟ್‌ಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News