ಭೂಮಿ ಊಹೆಗಿಂತಲೂ ಹೆಚ್ಚು ಬಿಸಿಯಾಗಬಹುದು: ಅಧ್ಯಯನ ಎಚ್ಚರಿಕೆ

Update: 2016-04-09 14:03 GMT

ವಾಶಿಂಗ್ಟನ್, ಎ. 9: ಜಾಗತಿಕ ತಾಪಮಾನವು ಈಗ ಊಹಿಸಿರುವುದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಭೂಮಿಯನ್ನು ಬಿಸಿ ಮಾಡಬಹುದಾಗಿದೆ, ಯಾಕೆಂದರೆ, ತಾಪಮಾನವನ್ನು ಲೆಕ್ಕಹಾಕುವ ಇಂದಿನ ವಿಜ್ಞಾನ ಮಾದರಿಗಳು ಮೋಡಗಳ ಪ್ರಭಾವವನ್ನು ಸರಿಯಾಗಿ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.
ಈ ಕುರಿತು ಯೇಲ್ ವಿಶ್ವವಿದ್ಯಾನಿಲಯ ಮತ್ತು ಲಾರೆನ್ಸ್ ಲಿವರ್‌ಮೋರ್ ನ್ಯಾಶನಲ್ ಲ್ಯಾಬರೇಟರಿಯ ಸಂಶೋಧಕರು ನಡೆಸಿದ ಸಂಶೋಧನಾ ವರದಿ ‘ಸಯನ್ಸ್’ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.
  ವಾತಾವರಣದಲ್ಲಿರುವ ಇಂಗಾಲದ ಡೈ ಆಕ್ಸೈಡ್ (ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯಿಂದ ಉತ್ಪಾದನೆಯಾಗುವ ಅನಿಲ) ಪ್ರಮಾಣ ದುಪ್ಪಟ್ಟುಗೊಂಡ ಸಂದರ್ಭದಲ್ಲಿ ಭೂಮಿಯ ಮೇಲ್ಮೈ ಉಷ್ಣತೆ ಎಷ್ಟು ಹೆಚ್ಚಬಹುದು ಎಂಬ ಬಗ್ಗೆ ಪರಿಸರ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. 2.1ರಿಂದ 4.7 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣತೆ ಹೆಚ್ಚಬಹುದು ಎಂಬ ನಿರ್ಧಾರಕ್ಕೆ ಅವರು ಬಂದಿದ್ದಾರೆ.
ಆದರೆ, ಈ ಮಾದರಿಗಳು ಸೂರ್ಯ ಕಿರಣವನ್ನು ಮರು ಪ್ರತಿಫಲಿಸುವ ಮೋಡಗಳ ಸಾಮರ್ಥ್ಯವನ್ನು ಹಿಗ್ಗಿಸುತ್ತವೆ ಹಾಗೂ ಆ ಮೂಲಕ ಭೂಮಿಯ ವಾತಾವರಣದಲ್ಲಿ ತಾಪಮಾನವನ್ನು ಕಡಿಮೆಗೊಳಿಸುತ್ತವೆ ಎಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ.
ಆದರೆ, ವಾಸ್ತವಿಕವಾಗಿ ಜಾಗತಿಕ ತಾಪಮಾನ 5ರಿಂದ 5.3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಬಹುದು ಎಂದು ಅಧ್ಯಯನದಲ್ಲಿ ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News