×
Ad

ಕ್ಯಾಂಟರ್‌ಬರಿಯ ಆರ್ಚ್ ಬಿಷಪ್‌ರ ತಂದೆ ಚರ್ಚಿಲ್‌ರ ಮಾಜಿ ಕಾರ್ಯದರ್ಶಿ

Update: 2016-04-09 22:29 IST

 ಲಂಡನ್, ಎ.9:ಕ್ಯಾಂಟರ್‌ಬರಿಯ ಆರ್ಚ್ ಬಿಷಪ್ ರೆವರೆಂಡ್ ಜಸ್ಟಿನ್ ವೆಲ್ಬೆರ ಡಿಎನ್‌ಎ ಪರೀಕ್ಷೆಯಲ್ಲಿ ಇಂಗ್ಲೇಂಡ್‌ನ ಮಾಜಿ ಪ್ರಧಾನಿ ವಿನ್ಸೆಂಟ್ ಚರ್ಚಿಲ್‌ರವರ ಕೊನೆಯ ಮಾಜಿ ಖಾಸಗಿ ಕಾರ್ಯದರ್ಶಿ ದಿವಂಗತ ಸರ್ ಆಂಟೋನಿ ಮೊಂಟಾಗ್ಯೂ ಬ್ರೋನೆಯ ಸುಪುತ್ರ ಎಂದು ಸಾಬೀತಾಗಿದೆ.

    ಆರ್ಚ್ ಬಿಷಪ್‌ರ ತಾಯಿ ಲೇಡಿ ವಿಲಿಯಮ್ಸ್ ರವರು 1955 ರಲ್ಲಿ ನಡೆದಿದ್ದ ತನ್ನ ಮದುವೆಗೆ ಮುನ್ನ ಸರ್ ಆಂಟೋನಿಯವರೊಂದಿಗೆ ಅಕ್ರಮ ಸಂಬಂಧ ಹೊಂದಿದೆ ಎಂದು ಈ ಮೊದಲು ದೃಢಪಡಿಸಿದ್ದರು.

 1977ರಲ್ಲಿ ಮೃತಪಟ್ಟ ವಿಸ್ಕಿ ಮಾರಾಟಗಾರ ಗೇವಿನ್ ವೆಲ್ಬೆಯವರೇ ತನ್ನ ತಂದೆ ಎಂದು ಆರ್ಚ್ ಬಿಷಪ್ ಜಸ್ಟಿನ್ ವೆಲ್ಬೆಯವರು ನಂಬಿಕೊಂಡಿದ್ದರು.

   ಇದೀಗ ಡಿಎನ್‌ಎ ಪರೀಕ್ಷೆಯ ಸುದ್ದಿ ಹೊರಬೀಳುತ್ತಿದ್ದಂತೆ ಆರ್ಚ್ ಬಿಷಪ್‌ರ ತಾಯಿ ಲೇಡಿ ವಿಲಿಯಮ್ಸ್ ‘‘ ಬಹುತೇಕ ಇದು ನಂಬಲಾಸಾಧ್ಯವಾದ ಆಘಾತ ’’ ಎಂದು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.ಆದರೂ ಲೇಡಿ ವಿಲಿಯಮ್ಸ್‌ನವರಿಗೆ ಈಗ ನೆನೆಪು ಅಸ್ಪಷ್ಟವಾಗಿದ್ದರೂ ಅವರ ಮಾಜಿ ಸಹೋದ್ಯೋಗಿ ಸರ್ ಆಂಟೋನಿಯೊಂದಿಗೆ ಸಂಪೂರ್ಣ ಪಾನಮತ್ತರಾಗಿದ್ದ ಸಂದರ್ಭದಲ್ಲಿ ದೈಹಿಕ ಸಂಪರ್ಕ ಇರಿಸಿಕೊಂಡಿದ್ದೆವು ಎಂದು ಅವರು ಈಗ ನೆನಪಿಸಿಕೊಂಡಿದ್ದಾರೆ.

  ಆಂಗ್ಲಿಕಾನ್ ಕಮ್ಯೂನಿಯನ್‌ನ ಜಗತ್ತಿನಾದ್ಯಂತ ಮನ್ನಣೆ ಗಳಿಸಿರುವ ಹಿರಿಯ ಪಾದ್ರಿ ಜಸ್ಟಿನ್ ವೆಲ್ಬೆ ಕೆಲ ವಾರಗಳ ಹಿಂದೆ ತನ್ನ ನಿಜವಾದ ತಂದೆ ಯಾರೆಂಬುದನ್ನು ಪತ್ತೆ ಮಾಡಿದ್ದರು.

   ಡಿಎನ್‌ಎ ಪರೀಕ್ಷೆಯಲ್ಲಿ ಸರ್ ಆಂಟೋನಿಯವರ ತೆಗೆದಿಟ್ಟ ಕೂದಲಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿ ಇದೀಗ ಆರ್ಚ್ ಬಿಷಪ್‌ನ ತಂದೆ ಸರ್ ಆಂಟೋನಿಯೆಂದು ಡಿಎನ್‌ಎ ಪರೀಕ್ಷೆಯಲ್ಲಿ ಸಾಬೀತಾಗಿದೆ. ಲಿವರ್‌ಪೂಲ್‌ನಲ್ಲಿ ಕಾಥ್ರೆಡೆಲ್ ಡೀನ್ ನಾಗಿ ಸೇವೆ ಸಲ್ಲಿಸಿದ ಬಿಷಪ್ ಜಸ್ಟಿನ್ 2013ರ ಫೆಬ್ರವರಿಯಲ್ಲಿ ಕ್ಯಾಂಟರ್‌ಬರಿಯ ಆರ್ಚ್ ಬಿಷಪ್ ಆಗಿ ಸೇವೆಸಲ್ಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News