ಎಚ್ಚರಿಕೆ! ಫೇಸ್‌ಬುಕ್‌ನಲ್ಲಿ ವೇಗವಾಗಿ ಹರಡುತ್ತಿದೆ ಅಪಾಯಕಾರಿ ವೀಡಿಯೊ ವೈರಸ್!
ಹೊಸದಿಲ್ಲಿ, ಎಪ್ರಿಲ್.10: ಸೋಶಿಯಲ್ ನೆಟ್‌ವರ್ಕಿಂಗ್‌ನಲ್ಲಿ ಇದೀಗ ಆಪತ್ತು. ಫೇಸ್‌ಬುಕ್‌ನಲ್ಲಿ ಒಂದು ವೈರಸ್ ಶೀಘ್ರಗತಿಯಲ್ಲಿ ಹರಡುತ್ತಿದೆ ಎಂದು ವರದಿಗಳು ತಿಳಿಸಿವೆ. ಒಂದು ವೇಳೆ ನಿಮಗೆ ಫೇಸ್‌ಬುಕ್‌ನಲ್ಲಿ ತಮ್ಮ ಗೆಳೆಯನ ಫೋಟೊದ ಜೊತೆ ಅವನ ಮೊದಲ ವೀಡಿಯೊ ನೋಡುವ ಪ್ರಸ್ತಾವ ಸಿಕ್ಕರೆ ಮರೆತು ಕೂಡ ಅದನ್ನು ಕ್ಲಿಕ್ ಮಾಡಬೇಡಿ. ಕ್ಲಿಕ್ ಮಾಡಿದರೆ ನಿಮ್ಮೊಂದಿಗೆ ಸಂಪರ್ಕವಿರುವ ಕೆಲವುಮಂದಿಗೆ ಈ ವೈರಸ್ ಹರಡಿ ಬಿಡುತ್ತದೆ. ಯಾವ ರೀತಿ ನಿಮ್ಮ ಫೇಸ್ ಬುಕ್‌ನಲ್ಲಿ ಈ ವೈರಸ್ ಬರುತ್ತದೆ ಎಂಬುದನ್ನು ಮೇಲೆ ನೀಡಲಾದ ಫೋಟೊದಲ್ಲಿ ತೋರಿಸಲಾಗಿದೆ.
ಈ ವೈರಸ್ ಜಾಲಕ್ಕೆ ಬಿದ್ದರೆ ನಿಮ್ಮ ವಾಲನ್ನು ಆಕ್ರಮಿಸಿಕೊಳ್ಳುತ್ತದೆ. ಇಂತಹದೇ ಸಂದೇಶ ನಿಮ್ಮ ಹೆಸರಲ್ಲಿ ನಿಮ್ಮ ಗೆಳೆಯರಿಗೂ ತಲುಪುತ್ತದೆ. ಒಂದುವೇಳೆ ನಿಮ್ಮ ಫೇಸ್ ಬುಕ್ ಎಕೌಂಟ್‌ನಲ್ಲಿ ವೈರಸ್ ದಾಳಿ ಇಟ್ಟಿದ್ದರೆ ಅದನ್ನು ಕೂಡಲೇ ಡಿಲಿಟ್ ಮಾಡಿ ಮತ್ತು ಪ್ರೊಫೈಲ್ ಪೇಜ್ ನಲ್ಲಿ ಟ್ಯಾಗ್ ಆದ ಎಲ್ಲ ಪೋಸ್ಟ್‌ಗಳನ್ನೂ ಡಿಲಿಟ್ ಮಾಡಿ ಎಂದು ವರದಿಗಳು ಸೂಚಿಸಿವೆ.