×
Ad

ಸಂಸತ್ ಭವನದ ಸಮೀಪದ ಕಟ್ಟಡದಲ್ಲಿ ಆಕಸ್ಮಿಕ ಬೆಂಕಿ

Update: 2016-04-10 23:59 IST

ಹೊಸದಿಲ್ಲಿ, ಎ.10: ಸಂಸತ್ ಭವನಕ್ಕೆ ಸೇರಿಕೊಂಡಿರುವ ಕಟ್ಟಡದ ಎರಡನೆ ಮಹಡಿಯ 212ನೆ ಕೊಠಡಿಯಲ್ಲಿ ಇಂದು ಬೆಂಕಿ ಕಾಣಿಸಿಕೊಂಡಿತೆಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ 8-10 ಅಗ್ನಿಶಾಮಕ ವಾಹನಗಳು ಧಾವಿಸಿದವು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಒಂದು ಏರ್ ಕಂಡಿಶನರ್ ಈ ಬೆಂಕಿಗೆ ಕಾರಣವೆನ್ನಲಾಗಿದೆಯೆಂದು ಅವರು ಹೇಳಿದ್ದಾರೆ.
ಬೆಂಕಿ ಕಾಣಿಸಿಕೊಂಡಾಗ, ಜೆಡಿಯು ಒಂದನೆ ಮಹಡಿಯಲ್ಲಿ ಸಭೆಯೊಂದನ್ನು ನಡೆಸುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News