"ನಿಮಗೆ ನಾಚಿಕೆಯಾಗಲ್ವ .. ........ಮಾನವೀಯತೆ ಇಲ್ಲವೋ "
Update: 2016-04-11 13:22 IST
ಗದಗ, ಎ.11: ಗದಗ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯುಟಿ ಖಾದರ‍್ ಅವರು ಅಲ್ಲಿನ ಅವ್ಯವಸ್ಥೆಯನ್ನು ಕಂಡು ದಂಗಾದರು. ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಹಿಳಾ ರೋಗಿಯೊಬ್ಬರಿಗೆ ಬೆಡ್‌ಶೀಟ್ ನೀಡದಕ್ಕೆ ಗರಂ ಆಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಯು.ಟಿ ಖಾದರ್ "ನಿಮಗೆ ನಾಚಿಕೆಯಾಗುದಿಲ್ಲವೇ , ನಿಮಗೆ ಮಾನವೀಯತೆ ಇಲ್ಲವೊ ’ ನೀವೆಲ್ಲ ವಿದ್ಯಾವಂತರು ಅಲ್ಲವೆ ? ಇಂತಹ ನರಕಯಾತನೆಯನ್ನು ಎಲ್ಲೂ ನೋಡಿಲ್ಲ" ಎಂದು ಗುಡುಗಿದರು.
ಆಸ್ಪತ್ರೆಯಲ್ಲಿ ಟಿಫಿನ್, ಊಟದ ಅವ್ಯವಸ್ಥೆಯನ್ನು ಒಂದು ವಾರದೊಳಗೆ ಸರಿಪಡಿಸಬೇಕು. ಇಲ್ಲವಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.