ವೈದ್ಯಕೀಯ ಕೋರ್ಸ್‌ಗಳ ಸೇರ್ಪಡೆಗೆ ಎನ್ ಇಇಟಿ ನಡೆಸಲು ಸುಪ್ರೀಂ ಆದೇಶ
Update: 2016-04-11 14:00 IST
ಹೊಸದಿಲ್ಲಿ, ಎ,11: ದೇಶಾದ್ಯಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ಎನ್ ಇಇಟಿ)ಯನ್ನು ಜಾರಿಗೆ ತರಲು ಸುಪ್ರೀಂ ಕೋರ್ಟ್ ಇಂದು ಅದೇಶ ನೀಡಿದೆ.
2013ರಲ್ಲಿ ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು ಸುಪ್ರೀಂಕೋರ್ಟ್‌ನ ನ್ಯಾಯಪೀಠವು ರದ್ದುಪಡಿಸಿ ಆದೇಶ ನೀಡಿತ್ತು.
ಈ ಆದೇಶವನ್ನು ಬದಿಗಿರಿಸಿರುವ ಸುಪ್ರೀಂ ಕೋರ್ಟ್ ಇದೀಗ ಎನ್ ಇಇಟಿ ಪರೀಕ್ಷೆ ನಡೆಸಲು ಅನುಮತಿ ನೀಡಿದೆ.
ಎಂಬಿಬಿಎಸ್, ಬಿಡಿಎಸ್ ಮತ್ತು ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವ ಭಾರತೀಯ ವೈದ್ಯಕೀಯ ಮಂಡಳಿಯ ಅಧಿಸೂಚನೆ ನ್ಯಾಯಸಮ್ಮತವಲ್ಲ ಎಂದು 2013 ಜೂನ್ ನಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.