ಉಕ್ರೇನಿನಲ್ಲಿ ಚೂರಿಯಿಂದ ಇರಿದು ಇಬ್ಬರು ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳ ಹತ್ಯೆ

Update: 2016-04-11 18:10 GMT

ಹೊಸದಿಲ್ಲಿ,ಎ.11: ಉಕ್ರೇನಿನ ಮೆಡಿಕಲ್ ಕಾಲೇಜೊಂದರಲ್ಲಿ ರವಿವಾರ ನಸುಕಿನಲ್ಲಿ ಮೂವರು ಉಕ್ರೇನಿಯನ್ ಪ್ರಜೆಗಳ ಗುಂಪು ಇಬ್ಬರು ಭಾರತೀಯ ವಿದ್ಯಾರ್ಥಿಗಳನ್ನು ಚೂರಿಯಿಂದ ಇರಿದು ಹತ್ಯೆಗೈದಿದ್ದು, ಇನ್ನೋರ್ವ ಗಾಯಗೊಂಡಿದ್ದಾನೆ.

ಉತ್ತರ ಪ್ರದೇಶದ ಮುಝಫ್ಫರ್‌ನಗರದ ನಿವಾಸಿ ಪ್ರಣವ್ ಶಾಂಡಿಲ್ಯ ಮತ್ತು ಗಾಝಿಯಾಬಾದ್ ನಿವಾಸಿ ಅಂಕುರ್ ಸಿಂಗ್ ಮೃತ ವಿದ್ಯಾರ್ಥಿಗಳಾಗಿದ್ದಾರೆ. ಆಗ್ರಾದ ಇಂದ್ರಜೀತ್ ಸಿಂಗ್ ಚೌಹಾಣ್‌ನನ್ನೂ ಚೂರಿಯಿಂದ ಇರಿಯ ಲಾಗಿದ್ದು, ಆತ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.

ದುರದೃಷ್ಟಕರ ಘಟನೆ ಯೊಂದರಲ್ಲಿ ರವಿವಾರ ನಸುಕಿನ ಮೂರು ಗಂಟೆಯ ಸುಮಾರಿಗೆ ಮೂವರು ಉಕ್ರೇನ್ ಪ್ರಜೆಗಳು ಉಝಗೊರೊಡ್ ಮೆಡಿಕಲ್ ಕಾಲೇಜಿನ ಮೂವರು ಭಾರತೀಯ ವಿದ್ಯಾರ್ಥಿಗಳಿಗೆ ಚೂರಿಯಿಂದ ಇರಿದಿದ್ದಾರೆ ಎಂದು ವಿದೇಶಾಂಗ ವ್ಯವ ಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಸೋಮವಾರ ಇಲ್ಲಿ ತಿಳಿಸಿದರು.

ಶಾಂಡಿಲ್ಯ ಮೂರನೇ ವರ್ಷದ ಮತ್ತು ಸಿಂಗ್ ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದರು.

ಗಾಯಾಳು ಚೌಹಾಣ್ ಹೇಳಿಕೆಯ ಆಧಾರದಲ್ಲಿ ಪೊಲೀಸರು ದೇಶದ ಗಡಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ಮೂವರು ಉಕ್ರೇನ್ ಪ್ರಜೆಗಳನ್ನು ಬಂಧಿಸಿದ್ದಾರೆ. ಅವರಿಂದ ಭಾರತೀಯ ವಿದ್ಯಾರ್ಥಿಗಳ ಪಾಸ್‌ಪೋರ್ಟ್ ಮತ್ತು ಇತರ ದಾಖಲೆಗಳು ಮತ್ತು ರಕ್ತಸಿಕ್ತ ಚೂರಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ ಎಂದು ಸ್ವರೂಪ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News