×
Ad

ಇನ್ನು ನಿಮ್ಮ ಸ್ಮಾರ್ಟ್ ಫೋನೇ ನಿಮ್ಮ ಬ್ಯಾಂಕ್ !

Update: 2016-04-12 16:46 IST

ಮುಂಬೈ : ಸ್ಮಾರ್ಟ್ ಫೋನುಗಳು ಕೇವಲ ಸಾಮಾಜಿಕ ಜಾಲತಾಣಗಳನ್ನು ಜಾಲಾಡಲು ಹಾಗೂ ಸೆಲ್ಫೀಗಳನ್ನು ತೆಗೆಯಲಷ್ಟೇ ಪ್ರಯೋಜನಕಾರಿಯಲ್ಲ ಇನ್ನು ಮುಂದೆ ಅವು ನಿಮ್ಮ ಮಿನಿ ಬ್ಯಾಂಕ್ ಆಗಿ ಕೂಡ ಕಾರ್ಯಾಚರಿಸಲಿವೆ. ದೇಶದ ಹತ್ತು ಪ್ರಮುಖ ಬ್ಯಾಂಕುಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದೊಂದಿಗೆ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಪೇಸ್ (ಯುಪಿಐ) ಎಂಬ ಮೆಗಾಆ್ಯಪ್ ಬಿಡುಗಡೆ ಮಾಡಿದ್ದು ಅದನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದಾಗಿದೆ. ಈ ಆ್ಯಪ್‌ನ ಬಳಕೆದಾರರು ಕನಿಷ್ಠ ಐವತ್ತು ರೂಪಾಯಿಯಿಂದ ಹಿಡಿದು ರೂ 1 ಲಕ್ಷದಷ್ಟು ಮೊತ್ತದ ಪಾವತಿಗಳನ್ನು ಈ ಮೂಲಕವೇ ಮಾಡಬಹುದಾಗಿದೆ. ಪ್ರಸಕ್ತ ಇರುವ ವ್ಯವಸ್ಥೆಯಲ್ಲಿಮೂರನೇ ವ್ಯಕ್ತಿಗೆ ಹಣ ಪಾವತಿ ಮಾಡಬೇಕಾಗಿದ್ದಲ್ಲಿ ಆತನನ್ನು ಬೆನಿಫೀಶಿಯರಿ ಆಗಿ ಸೇರಿಸಿಕೊಳ್ಳಬೇಕಾಗುತ್ತದೆಯಲ್ಲದೆ ಐಐಎಫ್‌ಸಿ ಕೋಡ್, ಖಾತೆ ಸಂಖ್ಯೆ ಹಾಗೂ ಶಾಖೆಯ ವಿವರ ನೀಡಬೇಕಾಗುತ್ತದೆಯಾದರೆ ಈ ಆ್ಯಪ್‌ನಲ್ಲಿ ಹಣ ಪಾವತಿ ಮಾಡಬೇಕಾದ ವ್ಯಕ್ತಿಯ ಯುನೀಕ್ ಐಡಿಯನ್ನು ಸೂಚಿಸಿ ನಂತರ ‘ಸೆಂಡ್’ ಒತ್ತಿದರಷ್ಟೇ ಸಾಕು. ನಂತರ ಪಾವತಿಯನ್ನು ಮಾನ್ಯಗೊಳಿಸಲು ಮೊಬೈಲ್ ಪಿನ್ ಸಂಖ್ಯೆಯನ್ನು ಈ ಆ್ಯಪ್ ಕೇಳುತ್ತದೆ.

ಯುಪಿಐ ಉಪಯೋಗಿಸುವ ವಿಧಾನ ಹೀಗಿದೆ :

1. ವ್ಯಕ್ತಿಯೊಬ್ಬನಿಗೆ ಬ್ಯಾಂಕ್ ಖಾತೆ ಹಾಗೂ ಸ್ಮಾರ್ಟ್‌ಫೋನ್ ಇರಬೇಕು.

2. ಬ್ಯಾಂಕೊಂದರ ಯುಪಿಐ ಆ್ಯಪ್ ಪ್ಲೇಸ್ಟೋರಿನಿಂದ ಡೌನ್‌ಲೋಡ್ ಮಾಡಿ

3.ಮೊಬೈಲ್ ಪಿನ್ ಜನರೇಟ್ ಮಾಡಿ

4. ಆಧಾರ್ ನಂಬರ್ ಲಿಂಕ್ ಮಾಡಿ

ಇದೀಗ ಕೇವಲ 10 ಬ್ಯಾಂಕುಗಳು ಈ ಯೋಜನೆಯ ಭಾಗವಾಗಿದ್ದರೆ ಶೀಘ್ರದಲ್ಲಿಯೇ ಇತರ ಹಲವು ಬ್ಯಾಂಕುಗಳು ಸೇರಲಿವೆ. ಒಂದು ಬ್ಯಾಂಕಿನ ಯುಪಿಐ ಆ್ಯಪ್ ಉಪಯೋಗಿಸಲು ಆ ಬ್ಯಾಂಕಿನಲ್ಲಿ ಖಾತೆ ಹೊಂದಿರಬೇಕಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News