×
Ad

ಮಲೇಶ್ಯ: 8 ಮೀಟರ್ ಉದ್ದದ, 250 ಕೆಜಿ ತೂಕದ ದೈತ್ಯ ಹೆಬ್ಬಾವು ಪತ್ತೆ

Update: 2016-04-12 17:24 IST

 ಕೌಲಾಲಂಪುರ, ಎ. 12: ಮಲೇಶ್ಯದ ದ್ವೀಪವೊಂದರ ಕಟ್ಟಡ ನಿರ್ಮಾಣ ಸ್ಥಳವೊಂದರಲ್ಲಿ ಇತ್ತೀಚೆಗೆ ದೈತ್ಯ ಹೆಬ್ಬಾವೊಂದು ಪತ್ತೆಯಾಗಿದೆ. ಇದು ಜಗತ್ತಿನ ಸೆರೆಹಿಡಿಯಲ್ಪಟ್ಟ ಅತ್ಯಂತ ಉದ್ದದ ಹೆಬ್ಬಾವು ಆಗಿರುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದರು.

ಸುಮಾರು ಎಂಟು ಮೀಟರ್ ಉದ್ದದ, 250 ಕೆಜಿ ಭಾರದ ಹೆಬ್ಬಾವು ಪೆನಾಂಗ್ ದ್ವೀಪದಲ್ಲಿ ಉರುಳಿದ ಮರವೊಂದರ ಅಡಿಯಲ್ಲಿ ಗುರುವಾರ ಪತ್ತೆಯಾಗಿತ್ತು.

ಮರಿಯೊಂದಕ್ಕೆ ಜನ್ಮ ನೀಡಿದ ಬಳಿಕ ಅದು ರವಿವಾರ ಸಾವನ್ನಪ್ಪಿತು ಎಂದು ಪೆನಾಂಗ್‌ನ ನಾಗರಿಕ ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಈವರೆಗೆ ಪತ್ತೆಯಾದ ಅತ್ಯಂತ ಉದ್ದದ ಹಾವಿನ ಉದ್ದ 7.67 ಮೀಟರ್ ಎನ್ನುವುದು ಗಿನ್ನೆಸ್ ದಾಖಲೆಗಳ ಪುಸ್ತಕದಲ್ಲಿ ದಾಖಲಾಗಿದೆ.

ದಾಖಲೆಗೆ ಸೇರಿರುವ ಮೆಡುಸ ಎಂಬ ಈ ಹೆಬ್ಬಾವು 158 ಕೆಜಿ ತೂಕ ಹೊಂದಿದ್ದು ಅಮೆರಿಕದ ಮಿಝೂರಿ ರಾಜ್ಯದ ಕ್ಯಾನ್ಸಸ್ ನಗರದ ಭೂತ ಬಂಗಲೆಯೊಂದರಲ್ಲಿ ವಾಸಿಸುತ್ತಿದೆ.

250 ಕೆಜಿ ತೂಕದ ಮಲೇಶ್ಯನ್ ಹೆಬ್ಬಾವನ್ನು ರಕ್ಷಿಸಲು 30 ನಿಮಿಷಗಳು ಬೇಕಾದವು ಎಂದು ಅಧಿಕಾರಿ ಹೇಳಿದ್ದಾಗಿ ಬಿಬಿಸಿ ವರದಿ ಮಾಡಿದೆ.

ಸರಕಾರದ ವನ್ಯಜೀವಿ ಇಲಾಖೆಗೆ ಹೆಬ್ಬಾವನ್ನು ಸಾಗಿಸುವ ಮುನ್ನವೇ ಅದು ಪ್ರಾಣ ಬಿಟ್ಟಿದೆ.

‘‘ನಾವು ಅದಕ್ಕೆ ಇಲಿಗಳನ್ನು ತಿನ್ನಿಸಿದೆವು, ಇತರ ಮಾಂಸ ಕೊಟ್ಟೆವು, ನೀರು ಕೊಟ್ಟೆವು. ಹಿಂದೆ ನಾವು ಇತರ ಹಾವುಗಳಿಗೆ ಏನೆಲ್ಲ ಕೊಟ್ಟಿದ್ದೇವೋ ಅದೇ ರೀತಿಯಲ್ಲಿ ತಿನ್ನಿಸಿದ್ದೇವೆ. ಅದು ಹೇಗೆ ಸತ್ತಿತ್ತು ಎಂಬುದು ನಮಗೆ ಗೊತ್ತಿಲ್ಲ’’ ಎಂದು ಅಧಿಕಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News