×
Ad

ಐಪಿಎಲ್: ಸನ್‌ರೈಸರ್ಸ್ ಗೆಲುವಿಗೆ 228 ರನ್ ಸವಾಲು

Update: 2016-04-12 22:24 IST

  ಬೆಂಗಳೂರು, ಎ.12: ನಾಯಕ ವಿರಾಟ್ ಕೊಹ್ಲಿ ಹಾಗೂ ದಕ್ಷಿಣ ಆಫ್ರಿಕದ ಸ್ಟಾರ್ ದಾಂಡಿಗ ಎಬಿ ಡಿವಿಲಿಯರ್ಸ್ ಭರ್ಜರಿ ಜೊತೆಯಾಟ, ಸರ್ಫರಾಝ್ ಖಾನ್(10 ಎಸೆತ, 35 ರನ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡದ ಗೆಲುವಿಗೆ 228 ರನ್ ಗುರಿ ನೀಡಿದೆ.

ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಂಗಳವಾರ ಟಾಸ್ ಜಯಿಸಿದ ಹೈದರಾಬಾದ್ ತಂಡ ಬೆಂಗಳೂರು ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಎರಡನೆ ಓವರ್‌ನಲ್ಲಿ ಕ್ರಿಸ್ ಗೇಲ್(1) ವಿಕೆಟ್‌ನ್ನು ಕಳೆದುಕೊಂಡಿದ್ದ ಆರ್‌ಸಿಬಿ ಆಘಾತ ಅನುಭವಿಸಿತ್ತು.

ಆಗ 2ನೆ ವಿಕೆಟ್‌ಗೆ 157 ರನ್ ಜೊತೆಯಾಟವನ್ನು ನಡೆಸಿದ ಕೊಹ್ಲಿ(75 ರನ್, 51 ಎಸೆತ, 7 ಬೌಂಡರಿ, 3 ಸಿಕ್ಸರ್) ಹಾಗೂ ಡಿವಿಲಿಯರ್ಸ್(82 ರನ್, 42 ಎಸೆತ, 7 ಬೌಂಡರಿ, 6 ಸಿಕ್ಸರ್) ಬೌಂಡರಿ ಹಾಗೂ ಸಿಕ್ಸರ್‌ಗಳ ಸುರಿಮಳೆಗೈಯುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

  ಇನಿಂಗ್ಸ್ ಅಂತ್ಯದಲ್ಲಿ ಅಬ್ಬರಿಸಿದ ಯುವ ದಾಂಡಿಗ ಸರ್ಫರಾಝ್ ಖಾನ್(ಔಟಾಗದೆ 35, 10 ಎಸೆತ, 5 ಬೌಂಡರಿ, 2 ಸಿಕ್ಸರ್) ಆರ್‌ಸಿಬಿ 4 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಲು ನೆರವಾದರು.

ಹೈದರಾಬಾದ್‌ನ ಕರಣ್ ಶರ್ಮ(0-57) ದುಬಾರಿ ಬೌಲರ್ ಎನಿಸಿಕೊಂಡರು. ಭುವನೇಶ್ವರ ಕುಮಾರ್(2-55) ಹಾಗೂ ಮುಸ್ತಾಫಿಝುರ್ರಹ್ಮಾನ್(2-26) ತಲಾ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News