ಅಸಮರ್ಥರಾದಾಗ ಸ್ವಯಂ ನಿವೃತ್ತಿ ಪಡೆಯುವುದು ಒಳಿತು
ಮಾನ್ಯರೇ,
ಇತ್ತೀಚಿನ ದಿನಗಳಲ್ಲಿ ಸರಕಾರಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಹಾಗೂ ವಿವಿಧ ಸ್ತರಗಳಲ್ಲಿ ಅಧಿಕಾರದಲ್ಲಿರುವ ಜನರು ಅನಾರೋಗ್ಯದಿಂದ ಬಳಲುತ್ತಿದ್ದರೂ ತಮ್ಮ ಹುದ್ದೆಗಳಿಂದ ನಿರ್ಗಮಿಸುತ್ತಿಲ್ಲ. ಸಾರ್ವಜನಿಕ ಜೀವನದಲ್ಲಿರುವ, ಅದರಲ್ಲೂ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ತಮ್ಮ ಎಲ್ಲ ಸವಲತ್ತುಗಳನ್ನು ಪಡೆದುಕೊಳ್ಳ್ಲುವುದು ಜನಸಾಮಾನ್ಯರ ತೆರಿಗೆಯ ಹಣದಿಂದ . ಎಲ್ಲಿಯ ತನಕ ಅವರಿಗೆ ದೇಹದಲ್ಲಿ ಶಕ್ತಿ ಇದ್ದು ತಮಗೆ ಬಂದಂತಹ ಜವಾಬ್ದಾರಿಗಳನ್ನು ನಿರ್ವಹಿಸಲು ಸಾಧ್ಯವಿರುತ್ತದೆಯೋ ಅಲ್ಲಿಯವರೆಗೂ ಆ ಹುದ್ದೆಗಳಲ್ಲಿ ಇರುವುದು ಸರಿಯಾದಂತಹ ಕ್ರಮವಾಗಿರುತ್ತದೆ .ಯಾವ ಸಂದರ್ಭದಲ್ಲಿ ಅವರ ದೇಹ ಅವರು ವಹಿಸಿಕೊಂಡ ಜವಾಬ್ದಾರಿಗಳನ್ನು ನಿರ್ವಹಿಸಲಾಗದೆ ಹಲವಾರು ತಿಂಗಳುಗಳ ಕಾಲ ಅನಾರೋಗ್ಯ ಪೀಡಿತರಾಗಿ ಹಾಸಿಗೆಯನ್ನು ಹಿಡಿದು ಕರ್ತವ್ಯಗಳನ್ನು ನಿರ್ವಹಿಸಲು ಅಶಕ್ತರಾದಾಗ ತಾವೇ ಮುಂದೆ ಬಂದು ತಮ್ಮ ಜವಾಬ್ದಾರಿಗಳನ್ನು ಬಿಟ್ಟುಕೊಟ್ಟು ಬೇರೆ ಆರೋಗ್ಯವಂತ ಜನರಿಗೆ ಇದನ್ನು ಹಸ್ತಾಂತರಿಸುವುದು ಒಳ್ಳೆಯ ಬೆಳವಣಿಗೆಯಾಗಿರುತ್ತದೆ . ರಾಜ್ಯದ ಪ್ರತಿಯೊಂದು ಇಲಾಖೆಗಳಲ್ಲಿಯೂ ಲಕ್ಷಾಂತರ ಕಡತಗಳು ಸೂಕ್ತ್ತವಾದಂತಹ ಆದೇಶಗಳಿಗಾಗಿ ಕಾದಿರುತ್ತವೆ .ಇಲ್ಲಿ ಬರುವಂತಹ ಒಂದೊಂದು ಆದೇಶವು ಒಂದೊಂದು ವ್ಯಕ್ತಿ ಅಥವಾ ಕುಟುಂಬದ ಬದುಕಿನ ಪ್ರಶ್ನೆಯಾಗಿರುತ್ತದೆ . ಅನಾರೋಗ್ಯದ ನಿಮಿತ್ತ ಅಧಿಕಾರಿಗಳು ಅಥವಾ ಮಂತ್ರಿಗಳು ಕರ್ತವ್ಯವನ್ನು ನಿರ್ವಹಿಸದೇ ಹಾಗೆಯೇ ಮುಂದುವರಿದರೆ ನಿಜಕ್ಕೂ ಇದು ಸಾರ್ವಜನಿಕರಿಗೆ ಮಾಡುವಂತಹ ಅಪಚಾರವಾಗುತ್ತದೆ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ಇನ್ನು ಮುಂದಾದರೂ ತಮ್ಮ ಮನಸ್ಥಿತಿಗಳನ್ನು ಬದಲಾಯಿಸಿಕೊಂಡು ದೇಹದಲ್ಲಿ ಕರ್ತವ್ಯ ನಿರ್ವಹಿಸಲು ನಿಜಕ್ಕೂ ಅಶಕ್ತರೆ ನಿಸಿದಾಗ ತಮ್ಮನ್ನು ಬಾಧಿಸುತ್ತಿರುವ ಕಾಯಿಲೆಗಳು ವಾಸಿಯಾಗಲು ಸಾಧ್ಯವಿಲ್ಲವೆಂದು ಎನಿಸಿದಾಗ ತಮ್ಮ ಹುದ್ದೆಗಳಿಂದ ನಿರ್ಗಮಿಸಿ ಸಾರ್ವಜನಿಕ ಜೀವನಕ್ಕೆ ಉಪಕಾರವನ್ನು ಮಾಡಿ.