ಮತ್ತೆ ಸಾಮಾನ್ಯ ಸ್ಥಿತಿಗೆ ಬಂದ ‘ಕೆಪ್ಲರ್’
Update: 2016-04-12 23:26 IST
ವಾಶಿಂಗ್ಟನ್, ಎ. 12: ಬಾಹ್ಯಾಕಾಶ ಶೋಧಕ ನೌಕೆ ‘ಕೆಪ್ಲರ್’ ಸ್ಥಗಿತಗೊಂಡಿದೆ ಎಂಬ ಸುದ್ದಿಯಿಂದ ಬೇಸರಗೊಂಡಿರುವ ಖಗೋಳ ಪ್ರಿಯರಿಗೆ ಶುಭ ಸುದ್ದಿ ಇಲ್ಲಿದೆ! ತುರ್ತು ಸ್ಥಿತಿಗೆ ಜಾರಿದ್ದ ಶೋಧಕವನ್ನು ನಾಸಾ ಇಂಜಿನಿಯರ್‌ಗಳು ಯಶಸ್ವಿಯಾಗಿ ಮತ್ತೆ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ಈಗ ಕೆಪ್ಲರ್‌ನ ಸಂಪರ್ಕ ಆ್ಯಂಟೆನ ಭೂಮಿಯತ್ತ ಚಾಚಿದ್ದು, ಗ್ರಹ ಶೋಧಕ ನೌಕೆ ಸುಸ್ಥಿತಿಯಲ್ಲಿದೆ. ಹೀಗಾಗಿ ಅದರಲ್ಲಿ ಸಂಗ್ರಹಗೊಂಡಿರುವ ಮಾಹಿತಿಗಳನ್ನು ಭೂಮಿಯಲ್ಲಿ ಪಡೆದುಕೊಳ್ಳಲು ಸಾಧ್ಯವಾಗಿದೆ.
ಈಗ ಗಗನ ನೌಕೆಯು ತನ್ನ ಕನಿಷ್ಠ ಇಂಧನ ಬಳಕೆ ಸ್ಥಿತಿಯಲ್ಲಿ ಕಾರ್ಯಾಚರಿಸುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಅದರ ಮಾಹಿತಿಯನ್ನು ಸ್ವೀಕರಿಸಿದ ಬಳಿಕ, ಇತ್ತೀಚಿನ ಅದರ ಕಾರ್ಯಾಚರಣೆ ದೋಷಕ್ಕೆ ಕಾರಣವೇನು ಎಂಬುದನ್ನು ವಿಶ್ಲೇಷಿಸಲಾಗುವುದು.