ಈಗ ಆ್ಯಂಬುಲೆನ್ಸ್‌ನಲ್ಲಿಯೂ ಮಾದಕ ವಸ್ತು ಸಾಗಾಟ!
Update: 2016-04-13 13:01 IST
ಚಂಡಿಗಡ, ಎಪ್ರಿಲ್ 13: ಹಿಮಾಚಲದಿಂದ ಚರಸ್‌ನ್ನು ತಂದು ಆ್ಯಂಬುಲೆನ್ಸ್ ಮೂಲಕ ಲುಧಿಯಾನ ಮತ್ತು ಪಠಾಣ್‌ಕೋಟ್ನಲ್ಲಿ ಸಪ್ಲೈ ಮಾಡುವ ಇಬ್ಬರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ(ಎನ್‌ಸಿಬಿ) ಮಂಗಳವಾರ ಮೊಹಾಲಿ ಸ್ಟುಡಿಯೋ ಬಳಿ ಸೆರೆಹಿಡಿದಿದೆ ಎಂದು ವರದಿಯಾಗಿದೆ.
ಲುಧಿಯಾನ ನಿವಾಸಿ ಮೋಹಿತ್‌ಕುಮಾರ್‌ಜೇಟಿ ಮತ್ತುಸಚಿನ್ ಶರ್ಮ ಎಂವರು ಈ ದುಷ್ಟ ವ್ಯಾಪಾರಕ್ಕಿಳಿದವರೆಂದು ಹೇಳಿದ್ದು ಜೀವರಕ್ಷಕವಾಗಿ ವರ್ತಿಸುವ ಆ್ಯಂಬುಲೆನ್ಸ್ ಒಳಗೆ 4ಕಿಲೋ 780ಗ್ರಾಮ್ ಚರಸ್ ವಶವಾಗಿದೆ ಎಂದುವರದಿಯಾಗಿದೆ. ಮಾದಕವಸ್ತು ಸಹಿತ ಆರೋಪಿಗಳನ್ನು ಕೋರ್ಟಿಗೆ ಹಾಜರು ಪಡಿಸಲಾಗಿದ್ದು ಕೋರ್ಟು ಆರೋಪಿಗಳಿಗೆ ನ್ಯಾಯಾಂಗ ಬಂಧನವಿಧಿಸಿದೆ ಎಂದು ವರದಿಗಳು ತಿಳಿಸಿವೆ.