ಜಮ್ಮು ಕಾಶ್ಮೀರ: ಹಂದವಾಡ ಗಲಭೆಗೆ ಹೊಸತಿರುವು,ಸೇನಾ ಜವಾನ ತನ್ನನ್ನು ಚುಡಾಯಿಸಿರಲಿಲ್ಲ ಎಂದ ವಿದ್ಯಾರ್ಥಿನಿ
ಶ್ರೀನಗರ, ಎಪ್ರಿಲ್.13: ಮಂಗಳವಾರದಂದು ಕುಪ್ವಾಡದ ಹಂದವಾಡಾದಲ್ಲಿ ಭದ್ರತಾಪಡೆಯ ಜವಾನನೊಬ್ಬ ವಿದ್ಯಾರ್ಥಿನಿಯೊಬ್ಬಳನ್ನು ಚುಡಾಯಿಸಿದ್ದನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ಗುಂಪನ್ನು ಚದುರಿಸಲು ಭದ್ರತಾ ಪಡೆ ಲಾಠಿ ಮತ್ತು ಆಶ್ರುವಾಯು ಪ್ರಯೋಗಿಸಿದ್ದು ಮೂವರು ಮೃತರಾಗಿ ಕೆಲವರು ಗಾಯಗೊಂಡ ಘಟನೆ ವರದಿಯಾಗಿತ್ತು. ಕಿರುಕುಳಕ್ಕೊಳಗಾದ ಬಾಲಕಿ ತನೊಂದಿಗೆ ಕೆಟ್ಟದಾಗಿ ವರ್ತಿಸಿದವನು ಸೇನೆಯ ಜವಾನನಲ್ಲ ಎಂದು ಹೇಳಿದ್ದು ಈಗ ಈ ಪ್ರಕರಣ ಹೊಸತಿರುವಿನತ್ತ ಹೊರಳಿದೆ.
ಶ್ರೀನಗರದಿಂದ 85 ಕಿಲೋಮೀಟರ್ ದೂರದ ಹಂದವಾಡ ಪಟ್ಟಣದಲ್ಲಿ ಪ್ರತಿಭಟನಾನಿರತರು ಕಲ್ಲೆಸತದಲ್ಲಿ ತೊಡಗಿದಾಗ ಅವರನ್ನು ಚದುರಿಸಲು ಸೇನೆಯ ಗೋಲಿಬಾರ್‌ನಿಂದಾಗಿ ಮಂಗಳವಾರ ಮೂವರು ಮೃತರಾಗಿದ್ದು ಮೃತರಾದವರಲ್ಲಿ ಉದಯೋನ್ಮುಖ ಕ್ರಿಕೆಟರ್ ಕೂಡಾ ಸೇರಿದ್ದಾನೆಂದು ವರದಿಯಾಗಿದೆ. ಗುಂಪು ವಿದ್ಯಾರ್ಥಿನಿಯೊಬ್ಬಳನ್ನು ಸೇನಾಜವಾನನೊಬ್ಬ ಚುಡಾಯಿಸಿದ್ದಾನೆಂದು ಪ್ರತಿಭಟನೆ ನಡೆಸಿತ್ತು. ಪೊಲೀಸ್ ವಕ್ತಾರ ತಿಳಿಸಿದಂತೆ ಸೇನೆಯ ಜವಾನ ಚುಡಾಯಿಸದ್ದಾನೆ ಎಂಬ ಘಟನೆಯ ನಂತರ ಭಾರಿ ಸಂಖ್ಯೆಯಲ್ಲಿ ಜನಸೇರಿತ್ತು. ಹಂದವಾಡದಲ್ಲಿ ಸೇನಾ ಬಂಕರ್ ಮೇಲೆ ಅವರು ದಾಳಿಗಿಳಿದರು. ಅಲ್ಲಿದ್ದ ಜವಾನರನ್ನು ಥಳಿಸಲು ಯತ್ನಿಸಿದರು. ಬಂಕರ್‌ಗೆ ಹಾನಿಯೊಡ್ಡಿದರು ಎಂದು ವರದಿಯಾಗಿದೆ. ಇದೀಗ ವಿದ್ಯಾರ್ಥಿನಿ ತನ್ನನ್ನು ಚುಡಾಯಿಸಿದ ವ್ಯಕ್ತಿ ಸೇನಾ ಜವಾನನಲ್ಲ ಎಂದಿರುವುದಾಗಿ ವರದಿಗಳು ತಿಳಿಸಿವೆ.