ಪೊಲೀಸರು ನಮ್ಮ ಬಟ್ಟೆ ಹರಿದು ಹಾಕಿದಾಗ, ಹಾಕಿಕೊಳ್ಳಲು ಬಟ್ಟೆ ನೀಡಿದ್ದು ಅದೇ 'ಭಯೋತ್ಪಾದಕರು': ಮುನ್ಸಿಫ್ ವೆಂಗಟ್ಟಿಲ್
ಹೈದರಾಬಾದ್ : ಮಾರ್ಚ್ 22ರಂದು ಹೈದರಾಬಾದ್ ವಿಶ್ವವಿದ್ಯಾಲಯದ ಉಪಕುಲಪತಿ ಅಪ್ಪಾ ರಾವ್ ಕೊಡಿಲೆ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದನ್ನು ಪ್ರತಿಭಟಿಸಿದ್ದಕ್ಕಾಗಿ ಬಂಧಿಸಲ್ಪಟ್ಟಿದ್ದ27 ವಿದ್ಯಾರ್ಥಿಗಳಲ್ಲಿ ಮುನ್ಸಿಫ್ ವೆಂಗಟ್ಟಿಲ್ ಒಬ್ಬರು. ತಮ್ಮ ಜೈಲಿನನುಭವವನ್ನು ಅವರು ಬಿಚ್ಚಿಟ್ಟಿದ್ದು ಹೀಗೆ.
ದಕ್ಷಿಣ ಭಾರತದ ಅತಿ ದೊಡ್ಡಕಾರಾಗೃಹವಾದ ಚೆರ್ಲಪಳ್ಳಿ ಕೇಂದ್ರ ಕಾರಾಗೃಹದ ಮಾನಸಸರೋವರ್ ಬ್ಲಾಕಿನಲ್ಲಿ ಅವರನ್ನಿರಿಸಲಾಗಿತ್ತು. ‘‘ಪೊಲೀಸರು ವಿಶ್ವವಿದ್ಯಾಲಯ ಆವರಣದಲ್ಲಿ ಲಾಠಿ ಚಾರ್ಜ್ ಮಾಡಿದಾಗ ನಮ್ಮ ಬಟ್ಟೆಗಳೆಲ್ಲಾ ಹರಿದಿತ್ತು. ಆಗ ನಮಗೆ ತಮ್ಮಲ್ಲಿದ್ದ ಹೆಚ್ಚಿನ ಬಟ್ಟೆಗಳನ್ನು ನೀಡಿದವರೇ ಪೊಲೀಸರು ಉಗ್ರವಾದಿಗಳೆಂದು ಗುರುತಿಸಿದ ಕೆಲವರು,’’ಎಂದು ಅವರು ನೆನಪಿಸಿಕೊಳ್ಳುತ್ತಾರೆ.
‘‘ಜೈಲಿನಲ್ಲಿ ಒಂದು ಶುಕ್ರವಾರ ನಾವು ಹತ್ತಿರದ ಸೆಲ್ಲಿನಲ್ಲಿರುವ ಮುಸ್ಲಿಂ ಕೈದಿಗಳೊಂದಿಗೆ ಪ್ರಾರ್ಥನೆ ಸಲ್ಲಿಸಬಹುದೇ ಎಂದು ಜೈಲು ಅಧಿಕಾರಿಗಳಲ್ಲಿ ಕೇಳಿದಾಗ ‘ನಿಮಗೆ ಅವರ ಬಗ್ಗೆ ಗೊತ್ತಿಲ್ಲ. ಅವರು ಉಗ್ರರು,’ಎಂದಿದ್ದರು. ನಿಜ ಹೇಳಬೇಕೆಮದರೆ ಈ ‘ಉಗ್ರವಾದಿಗಳೇ’ ಪೊಲೀಸರ ಲಾಠಿ ಚಾರ್ಜ್ ಸಂದರ್ಭ ನಮ್ಮ ಬಟ್ಟೆಗಳು ಹರಿದಿವೆಯೆಂದು ತಿಳಿದು ಜೈಲಿನಲ್ಲಿ ನಮಗೆಬಟ್ಟೆಗಳನ್ನು ಕೊಟ್ವವರು. ಒಂದು ದಿನನಾನು ಅಕ್ಬರುದ್ದೀನ್ ಓವೈಸಿಯವರ ಕೊಲೆಯತ್ನ ನಡೆಸಿದ ಆರೋಪದ ಮೇಲೆ ಬಂಧಿಸಲ್ಪಟ್ಟ ಒಟ್ಟು ಎಂಟು ಮಂದಿ ಮುಸ್ಲಿಂ ಕೈದಿಗಳಲ್ಲಿ ಒಬ್ಬರಾದ ಬಹಾದ್ದುರ್ಆಲಿ ಖಾನ್ (56) ಅವರನ್ನು ಕಂಡು ಮಾತನಾಡಿದೆ. ‘ನಾವಿಲ್ಲಿ ವಿಚಾರಣಾಧೀನ ಕೈದಿಗಳಾಗಿ ಬಂದು ನಾಲ್ಕು ವರ್ಷಗಳಾದವು,’ ಎಂದು ಅವರು ಹೇಳಿದರು. ಅವರಲ್ಲಿ ಹಿರಿಯವರಾದ 73 ವರ್ಷದಯೂನುಸ್ ಖಾನ್ ಅವರನ್ನು ನನಗೆ ಪರಿಚಯಿಸಿದರು. ಅವರು ವೃತ್ತಿಯಲ್ಲಿ ರೈತರಾಗಿದ್ದರು ಹಾಗೂ ಯಾವುದೇ ರಾಜಕೀಯ ನಂಟು ಅವರಿಗಿರಿಲ್ಲ.’’
‘‘ನಮ್ಮ ಮಾನಸಸರೋವರ್ ಬ್ಲಾಕಿನಲ್ಲಿದ್ದ ಹಿರಿಯ ಕೈದಿ 82 ವರ್ಷದ ಶೇರ್ ಆಲಿ. ಅವರು ಪಾಕಿಸ್ತಾನಕ್ಕೆ ರೂ 30,000 ಸ್ಮಗ್ಲಿಂಗ್ ಮಾಡಿದ ಆರೋಪದ ಮೇಲೆ ಬಂಧಿತರಾಗಿ ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಕಳೆದ ವರ್ಷ ಅವರ ವಿರುದ್ಧದ ಆರೋಪಗಳನ್ನು ಕೈಬಿಡಲಾಗಿದ್ದರೂ, ದಾಖಲೆಗಳನ್ನು ಪೂರೈಸಿ ಅವರನ್ನು ಜೈಲಿನಿಂದ ಹೊರಕ್ಕೆ ಕರೆದುಕೊಂಡು ಹೋಗಲು ಅವರ ಬಂಧುಗಳ್ಯಾರೂ ಇರಲಿಲ್ಲ,’’ಎಂದು ವೆಂಗಟ್ಟಿಲ್ ಹೇಳಿದರು.