×
Ad

ಕೆಂಪು ಸಮುದ್ರ ದ್ವೀಪಗಳು 60 ವರ್ಷಗಳ ಬಳಿಕ ಸೌದಿಗೆ

Update: 2016-04-13 23:11 IST

ಕೈರೋ, ಎ. 13: ಕೆಂಪು ಸಮುದ್ರದಲ್ಲಿರುವ ಎರಡು ಆಯಕಟ್ಟಿನ ದ್ವೀಪಗಳ ನಿಯಂತ್ರಣವನ್ನು ಸೌದಿ ಅರೇಬಿಯಕ್ಕೆ ವಹಿಸುವ ಈಜಿಪ್ಟ್‌ನ ನಿರ್ಧಾರವನ್ನು ಆ ದೇಶದ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್-ಸಿಸಿ ಇಂದು ಸಮರ್ಥಿಸಿಕೊಂಡಿದ್ದಾರೆ. ಈಜಿಪ್ಟ್ ತನ್ನ ಭೂಭಾಗವನ್ನು ಬೇರೆಯವರಿಗೆ ಒಪ್ಪಿಸುತ್ತಿಲ್ಲ, ಸೌದಿಗಳ ಹಕ್ಕನ್ನು ಅವರಿಗೆ ಮರಳಿಸುತ್ತಿದೆ ಎಂದು ಅವರು ಹೇಳಿದರು. ಇತ್ತೀಚೆಗೆ ಕೈರೋದಲ್ಲಿ ಇಟಲಿಯ ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ, ಹಿಂಸೆ ನೀಡಿ ಕೊಂದ ಪ್ರಕರಣದಲ್ಲಿ ಈಜಿಪ್ಟ್‌ನ ಭದ್ರತಾ ಪಡೆಗಳ ಪಾತ್ರವಿಲ್ಲ ಎಂಬ ದೇಶದ ನಿಲುವನ್ನು ಅವರು ಪುನರುಚ್ಚರಿಸಿದರು.

 ಅಕಾಬ ಕೊಲ್ಲಿಯಲ್ಲಿರುವ ತಿರಾನ್ ಮತ್ತು ಸನಾಫಿರ್ ಎಂಬ ಎರಡು ದ್ವೀಪಗಳು ಸೌದಿ ಅರೇಬಿಯಕ್ಕೆ ಸೇರಿದ್ದಾಗಿವೆ ಎಂಬುದಾಗಿ ಈಜಿಪ್ಟ್ ಸರಕಾರ ಹೇಳುತ್ತದೆ. ಈ ದ್ವೀಪಗಳನ್ನು ಇಸ್ರೇಲ್‌ನಿಂದ ರಕ್ಷಿಸಲು 1950ರಲ್ಲಿ ಸೌದಿ ಅರೇಬಿಯ ಈಜಿಪ್ಟನ್ನು ಕೋರಿತ್ತು. 1967ರ ಮಧ್ಯಪ್ರಾಚ್ಯ ಯುದ್ಧದಲ್ಲಿ ಇಸ್ರೇಲ್ ಈ ದ್ವೀಪಗಳನ್ನು ವಶಪಡಿಸಿಕೊಂಡಿತು. ಆದರೆ, ಬಳಿಕ, 1979ರ ಶಾಂತಿ ಒಪ್ಪಂದದ ವಿಧಿಗಳನ್ವಯ ಈಜಿಪ್ ್ಟಗೆಮರಳಿಸಿತು. ‘‘ನಾವು ನಮ್ಮ ಹಕ್ಕುಗಳನ್ನು ಬಿಟ್ಟುಕೊಟ್ಟಿಲ್ಲ. ಬದಲಿಗೆ, ನಾವು ಇತರರ ಹಕ್ಕುಗಳನ್ನು ಅವರಿಗೆ ಕೊಟ್ಟಿದ್ದೇವೆ’’ ಎಂದು ಅಲ್-ಸಿಸಿ ನೇರಪ್ರಸಾರ ಕಾರ್ಯಕ್ರಮವೊಂದರಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News