ಝಾಕಿರ್ ನಾಯ್ಕ್ ರನ್ನು ಜರೆದ ರಾಜಕಾರಣಿಯ ಕಚೇರಿಗೆ ಪೆಟ್ರೋಲ್‌ಬಾಂಬ್
ಕೌಲಾಲಂಪುರ, ಎ. 14: ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್ ರನ್ನು ಸೈತಾನ ಎಂದು ಕರೆದ ಮಲೇಶ್ಯದ ಹಿರಿಯ ರಾಜಕೀಯ ನಾಯಕನ ಕಚೇರಿಗೆ ಪೆಟ್ರೋಲ್ ಬಾಂಬ್ ಎಸೆದ ಘಟನೆ ನಡೆದಿದೆ.
ಪ್ರತಿಪಕ್ಷ ಆಳ್ವಿಕೆ ಇರುವ ಪೆನಾಂಗ್ ರಾಜ್ಯದ ಉಪಮುಖ್ಯಮಂತ್ರಿ ಪಿ.ರಾಮಸ್ವಾಮಿಯ ವಿರುದ್ಧ ಆಕ್ರಮಣ ನಡೆದಿದೆ. ದಾಳಿ ಬೆಳ್ಳಂಬೆಳಗ್ಗೆ ನಡೆದಿದ್ದರಿಂದ ಯಾರಿಗೂ ಗಾಯಗಳಾಗಿಲ್ಲ. ಝಾಕಿರ್ ನಾಯ್ಕ್ ರನ್ನು ಸೈತಾನ ಎಂದು ರಾಮಸ್ವಾಮಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ಈ ಘಟನೆಯ ಕಾರಣದಿಂದ ದಾಳಿ ನಡೆದಿರಬಹುದೆಂದು ಸ್ವತಃ ಅವರೇ ತಿಳಿಸಿರುವುದಾಗಿ ವರದಿಯಾಗಿದೆ. ಭಾರತೀಯ ಹಾಗೂ ಧಾರ್ಮಿಕ ವಿದ್ವಾಂಸರೂ ಆದ ಝಾಕಿರ್ ನಾಯ್ಕ್ ಇತರ ಧರ್ಮ ವಿಶ್ವಾಸಗಳನ್ನು ಹಾನಿಪಡಿಸುವ ರೀತಿಯಲ್ಲಿ ವಿದ್ವೇಶ ಭಾಷಣ ಮಾಡಿದ್ದಾರೆ ಎಂದು ರಾಮಸ್ವಾಮಿ ಆರೋಪಿಸಿದ್ದಾರೆ.
ಆದರೆ ಸೈತಾನ್ ಎಂಬ ಪ್ರಯೋಗ ಮಲೇಶ್ಯನ್ ಮುಸ್ಲಿಮರ ನಡುವೆ ವಿರೋಧಕ್ಕೆ ಕಾರಣವಾಗಿತ್ತು. ಇದು ಮನಗಂಡ ತಾನು ಆ ಮಾತನ್ನು ಹಿಂದೆಗೆದಿದ್ದೆ ಎಂದೂ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.