×
Ad

'ಇಬೇ'ಯಲ್ಲಿ ನವಾಝ್ ಶರೀಫ್ ಮಾರಾಟಕ್ಕೆ!

Update: 2016-04-14 20:21 IST

ಇಸ್ಲಾಮಾಬಾದ್, ಎ. 14: ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್‌ರನ್ನು ಇಕಾಮರ್ಸ್ ವೆಬ್‌ಸೈಟ್ 'ಇಬೇ'ಯಲ್ಲಿ 66,200 ಪೌಂಡ್ (ಸುಮಾರು 62 ಲಕ್ಷ ರೂಪಾಯಿ)ಗಳಿಗೆ ಮಾರಾಟಕ್ಕೆ ಇಡಲಾಗಿದೆ. ಅವರನ್ನು ಮಾರಾಟಕ್ಕಿಟ್ಟ ವ್ಯಕ್ತಿ ಅವರನ್ನು ''ನಿರುಪಯುಕ್ತ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್'' ಎಂಬುದಾಗಿ ಬಣ್ಣಿಸಿದ್ದಾನೆ.

 ''ಬಳಸಿದ ಪಾಕಿಸ್ತಾನಿ ಪ್ರಧಾನಿ ನವಾಝ್ ಶರೀಫ್ ಮಾರಾಟಕ್ಕೆ. ಅವರ ಅಗತ್ಯವಿಲ್ಲ. ಪ್ಯಾಕ್ ಮಾಡಲು ಬಾಕ್ಸ್ ಕೊಡಲಾಗುವುದಿಲ್ಲ. ಯಾವುದೇ ಸೂಚನೆಗಳೂ ಇಲ್ಲ. ಖರೀದಿದಾರರು ಅವರನ್ನು ಕರೆದುಕೊಂಡು ಹೋಗಬೇಕು. ವಸ್ತುವನ್ನು ಮುಟ್ಟಲು ಮಾರಾಟಗಾರ ಸಿದ್ಧನಿಲ್ಲ. ಮಧ್ಯ ಲಂಡನ್‌ನಿಂದ ಅವರನ್ನು ಪಡೆದುಕೊಳ್ಳಿರಿ. ಮಾರಾಟ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಿಳಾಸ ಒದಗಿಸಲಾಗುವುದು. ಖರೀದಿದಾರ ಅವರನ್ನು ಸಾಗಿಸಲು ತನ್ನದೇ ವ್ಯವಸ್ಥೆ ಮಾಡಿಕೊಳ್ಳಬೇಕು'' ಎಂಬುದಾಗಿ ವಿವರಣೆ ಹೇಳುತ್ತದೆ.

''ಅದು ಕೆಲಸ ಮಾಡುವ ಸ್ಥಿತಿಯಲ್ಲಿ ಇಲ್ಲ, ಅದು ಯಾವತ್ತೂ ಕೆಲಸ ಮಾಡಿಯೇ ಇಲ್ಲ. ಅದು ಹುಟ್ಟಿನಿಂದಲೇ ದೋಷಪೂರಿತ ಹಾಗೂ ಭ್ರಷ್ಟವಾಗಿದೆ. ಅದನ್ನು ಪಡೆದುಕೊಂಡು ನಮ್ಮನ್ನು ಈ ರೋಗದಿಂದ ಮುಕ್ತಗೊಳಿಸಿ''.

''ಸಾಮಾನ್ಯವಾಗಿ ಇಂಗ್ಲೆಂಡ್, ಅಮೆರಿಕ ಮತ್ತು ಟರ್ಕಿಯಲ್ಲಿ ಕಂಡುಬರುತ್ತಾರೆ. ಪಾಕಿಸ್ತಾನದಲ್ಲಿ ಇರುವುದು ಕಡಿಮೆ. ಅವರ ಎಲ್ಲ ಉದ್ಯಮ, ಆಸ್ತಿ ಮತ್ತು ಕುಟುಂಬ ಲಂಡನ್‌ನಲ್ಲಿದೆ. ಆದರೆ, ಪಾಕಿಸ್ತಾನದ ಪ್ರಧಾನಿಯಾಗಬೇಕೆಂದು ಹಂಬಲಿಸುತ್ತಾರೆ. ಪ್ರಸಕ್ತ, ತನ್ನ ಭ್ರಷ್ಟ ಆಸ್ತಿಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಮತ್ತು ತನ್ನನ್ನು ತಾನು ಹೇಗೆ ರಕ್ಷಿಸಿಕೊಳ್ಳುವುದು ಎಂಬ ಬಗ್ಗೆ ಲಂಡನ್‌ನಲ್ಲಿ ಪಾಕಿಸ್ತಾನದ ಮಾಜಿ ಭ್ರಷ್ಟ ಅಧ್ಯಕ್ಷರೊಂದಿಗೆ ಚರ್ಚಿಸುತ್ತಿದ್ದಾರೆ'' ಎಂದು ವಿವರಣೆ ಹೇಳುತ್ತದೆ.

ಮಾರಾಟಕ್ಕೆ 5 ದಿನಗಳು ಮತ್ತು 22 ಗಂಟೆಗಳು ಉಳಿದಿವೆ ಹಾಗೂ ಅವರನ್ನು ಕೊಂಡುಕೊಳ್ಳಲು 100 ಬಿಡ್‌ಗಳು ಸಲ್ಲಿಕೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News