×
Ad

ಪೂರಂ ಉತ್ಸವದಲ್ಲಿ ಸುಡುಮದ್ದು ಪ್ರದರ್ಶನಕ್ಕೆ ಹೈಕೋರ್ಟ್ ಅಸ್ತು

Update: 2016-04-14 21:18 IST

ಕೊಚ್ಚಿ,ಎ.14: ಕೇರಳ ಉಚ್ಚ ನ್ಯಾಯಾಲಯವು ರವಿವಾರ 113 ಜೀವಗಳನ್ನು ಬಲಿ ತೆಗೆದುಕೊಂಡಿದ್ದ ಕೊಲ್ಲಂ ಪುತ್ತಿಂಗಲ್ ದೇವಸ್ಥಾನದ ಅಗ್ನಿ ದುರಂತದ ಹಿನ್ನೆಲೆಯಲ್ಲಿ ತಾನು ಹೇರಿರುವ ನಿಷೇಧದಿಂದ ತ್ರಿಶೂರಿನಲ್ಲಿ ನಡೆಯುತ್ತಿರುವ ಪೂರಂ ಉತ್ಸವಕ್ಕೆ ವಿನಾಯಿತಿಯನ್ನು ನೀಡಿ ಗುರುವಾರ ಆದೇಶವನ್ನು ಹೊರಡಿಸಿದ್ದು, ಕಡಿಮೆ ಶಬ್ದದ ಸುಡುಮದ್ದುಗಳ ಪ್ರದರ್ಶನಕ್ಕೆ ಹಸಿರು ನಿಶಾನೆಯನ್ನು ತೋರಿಸಿದೆ.

ಯಾವುದೇ ಅನಧಿಕೃತ ರಾಸಾಯನಿಕಗಳನ್ನು ಸುಡುಮದ್ದು ಪ್ರದರ್ಶನದಲ್ಲಿ ಬಳಸಕೂಡದು ಮತ್ತು ಶಬ್ದದ ಮಟ್ಟವು 125 ಡೆಸಿಬಲ್‌ಗಳನ್ನು ಮೀರುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಥೊಟ್ಟತ್ತಿಲ್ ಬಿ.ರಾಧಾಕೃಷ್ಣನ್ ಮತ್ತು ಅನು ಶಿವರಾಮನ್ ಅವರನ್ನೊಳಗೊಂಡ ಪೀಠವು ಆದೇಶದಲ್ಲಿ ಹೇಳಿದೆ.

ಪೂರಂ ಉತ್ಸವವು ಎ.18ರಂದು ಅಂತ್ಯಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News