×
Ad

ತುರ್ತು ಪರಿಸ್ಥಿತಿ ಘೋಷಣೆ

Update: 2016-04-14 22:45 IST

ವಾಶಿಂಗ್ಟನ್, ಎ. 14: ಕೆನಡದ ನಾರ್ದರ್ನ್ ಓಂಟಾರಿಯೊದಲ್ಲಿ ಮೂಲನಿವಾಸಿ ಸಮುದಾಯ ವೊಂದು ವಾಸಿಸುವ ಸಣ್ಣ ಗ್ರಾಮ ‘ಅಟ್ಟವಪಿಸ್ಕಟ್ ಫಸ್ಟ್ ನೇಶನ್’ನಲ್ಲಿ ಬಿಕ್ಕಟ್ಟೊಂದು ತಲೆದೋರಿದೆ. 2,000ಕ್ಕಿಂತಲೂ ಕಡಿಮೆ ಜನಸಂಖ್ಯೆ ಹೊಂದಿರುವ ಈ ಗ್ರಾಮ ‘ಆತ್ಮಹತ್ಯಾ ಮನೋಭಾವ’ ಎಂಬ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದೆ.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಅಟ್ಟವಪಿಸ್ಕಟ್‌ನಲ್ಲಿ 13 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಳು. ಅಂದಿನಿಂದ 100ಕ್ಕೂ ಅಧಿಕ ಆತ್ಮಹತ್ಯಾ ಪ್ರಯತ್ನಗಳು ನಡೆದಿವೆ ಎಂದು ಕೆನಡದ ಪತ್ರಿಕೆಗಳು ವರದಿ ಮಾಡಿವೆ. ಆ ಪೈಕಿ ಮಾರ್ಚ್ ತಿಂಗಳಲ್ಲೇ 28 ಯತ್ನಗಳು ನಡೆದಿವೆ. ಕಳೆದ ಶನಿವಾರ ರಾತ್ರಿಯೊಂದರಲ್ಲೇ 11 ಮಂದಿ ತಮ್ಮ ಬದುಕನ್ನು ಕೊನೆಗೊಳಿಸಲು ಯತ್ನಿಸಿದರು ಎಂದು ಅಧಿಕಾರಿಗಳು ಹೇಳುತ್ತಾರೆ. ಹೀಗಾಗಿ, ಗ್ರಾಮದ ಮುಖ್ಯಸ್ಥ ಮತ್ತು ಕೌನ್ಸಿಲ್ ಗ್ರಾಮದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ‘‘ನಮ್ಮ ಸಮುದಾಯಕ್ಕೆ ನೆರವಿನ ಅಗತ್ಯವಿದೆ ಎಂದು ನಾನು ಸ್ನೇಹಿತರು, ಸರಕಾರವನ್ನು ಕೇಳುತ್ತಿದ್ದೇನೆ’’ ಎಂದು ಅಟ್ಟವಪಿಸ್ಕಟ್ ಫಸ್ಟ್ ನೇಶನ್ ಮುಖ್ಯಸ್ಥ ಬ್ರೂಸ್ ಶಿಶೀಶ್ ಹೇಳಿದ್ದಾರೆ. ‘‘ಆತ್ಮಹತ್ಯೆಗೆ ಮುಂದಾದವರಲ್ಲಿ ನನ್ನ ಸಂಬಂಧಿಕರು, ಸ್ನೇಹಿತರೂ ಇದ್ದಾರೆ’’ ಎಂದರು.
ಶನಿವಾರ ಗ್ರಾಮದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಬಳಿಕ ಅಲ್ಲಿ ಹೆಚ್ಚಿನ ಸಂಖ್ಯೆಯ ಆತ್ಮಹತ್ಯಾ ಯತ್ನಗಳು ನಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News