×
Ad

ಸರಕಾರಿ ವೈದ್ಯನ ಮೇಲೆ ಹಲ್ಲೆ ನಡೆಸಿದ್ದ ಗುಜರಾತಿನ ಬಿಜೆಪಿ ಶಾಸಕನಿಗೆ ಜೈಲು

Update: 2016-04-14 23:49 IST

ಅಹ್ಮದಾಬಾದ್,ಎ.14: ಮೂರು ವರ್ಷಗಳ ಹಿಂದೆ ಸರಕಾರಿ ಆಸ್ಪತ್ರೆಯೊಂದರ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಬಿಜೆಪಿ ಶಾಸಕ ನರನ್‌ಭಾಯಿ ಕಛಡಿಯಾ ಅವರಿಗೆ ಅಮ್ರೇಲಿಯ ನ್ಯಾಯಾಲಯವು ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 35,000 ರೂ.ದಂಡವನ್ನು ವಿಧಿಸಿದೆ.
ಅಮ್ರೇಲಿಯ ಎರಡು ಬಾರಿಯ ಶಾಸಕ ಕಛಡಿಯಾ ಮತ್ತು ಇತರ ದೋಷಿಗಳು ಉಚ್ಚ ನ್ಯಾಯಾಲಯದಲ್ಲಿ ತೀರ್ಪಿನ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಲು ಸಾಧ್ಯವಾಗುವಂತೆ ನ್ಯಾ.ಡಿ.ಆರ್.ಭಟ್ ಅವರು ಶಿಕ್ಷೆ ಜಾರಿಗೆ ಒಂದು ತಿಂಗಳ ತಡೆಯಾಜ್ಞೆಯನ್ನು ನೀಡಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಜುಲೈ 2013ರ ತೀರ್ಪಿನಂತೆ ಕಛಡಿಯಾ ಅವರು ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ಅನರ್ಹಗೊಳ್ಳಬಹುದು.

2013,ಜ.1ರಂದು ಕಛಡಿಯಾ ಮತ್ತು ಇತರರು ಅಮ್ರೇಲಿ ಸರಕಾರಿ ಆಸ್ಪತ್ರೆಯ ವೈದ್ಯ ಭಿಮಜಿಭಾಯಿ ದಾಭಿ ಅವರ ಮೇಲೆ ಹಲ್ಲೆ ನಡೆಸಿ,ಜಾತಿನಿಂದನೆಗೈದಿದ್ದರೆಂದು ಆರೋಪಿಸಲಾಗಿತ್ತು. ದಾಭಿ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News