×
Ad

ಬ್ರಿಟನ್ ರಾಜಕುಮಾರನ ಕೈಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಬೆರಳಚ್ಚು!

Update: 2016-04-15 16:21 IST

ಹೊಸದಿಲ್ಲಿ, ಎ. 15: ಬ್ರಿಟನ್ ರಾಜಕುಮಾರ ವಿಲಿಯಂ ಹಾಗೂ ರಾಜಕುಮಾರಿ ಕೇಟ್ ಮಿಡಲ್‌ಟನ್ ರಾಜಧಾನಿಗೆ ಎಪ್ರಿಲ್ 12ರಂದು ಭೇಟಿ ನೀಡಿದಾಗ ಪ್ರಧಾನಿ ನರೇಂದ್ರ ಮೋದಿ ರಾಜಕುಮಾರನಿಗೆ ನೀಡಿದ ಹಸ್ತಲಾಘವವಂತೂ ಅದೆಷ್ಟು ಅಮೋಘವಾಗಿತ್ತೆಂದರೆ ಅದು ರಾಜಕುಮಾರ ವಿಲಿಯಂನ ಕೈಯಲ್ಲಿ ತನ್ನ ಛಾಪನ್ನು ಒತ್ತಿಯೇ ಬಿಟ್ಟಿತ್ತು.
 ಹೈದರಾಬಾದ್ ಹೌಸ್‌ನ ಮೆಟ್ಟಿಲುಗಳಲ್ಲಿ ಬ್ರಿಟನ್ ರಾಜಕುಮಾರ ಹಾಗೂ ರಾಜಕುಮಾರಿಯನ್ನು ಬರಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ ರಾಜಕುಮಾರ ವಿಲಿಯಂಗೆ ನೀಡಿದ ದೀರ್ಘ ಮತ್ತು ದೃಢವಾದ ಹಸ್ತಲಾಘವ ತನ್ನ ಪ್ರಭಾವವನ್ನು ಬೀರಿಯೇ ಬಿಟ್ಟಿದೆಯೆಂದು ಹಲವರು ಹೇಳಿಕೊಂಡಿದ್ದಾರೆ. ಆದರೆ ಈ ಕಾರ್ಯಕ್ರಮ ಎಲ್ಲ ಅಧಿಕೃತ ಕಾರ್ಯಕ್ರಮಗಳಂತೆ ಸುಸೂತ್ರವಾಗಿ ನಡೆಯಿತಾದರೂ ಈ ಹಸ್ತಲಾಘವ ಸಂದರ್ಭದ ಕ್ಲೋಸ್-ಅಪ್ ಫೊಟೊ ಒಂದಂತೂ ಪ್ರಧಾನಿಯ ಬೆರಳಚ್ಚು ರಾಜಕುಮಾರನ ಕೈಯಲ್ಲಿ ಮೂಡಿರುವುದನ್ನು ಸ್ಪಷ್ಟಪಡಿಸಿದೆ.
ದಿ ಡೈಲಿ ಮೇಲ್ ಪ್ರಕಟಿಸಿದ ಚಿತ್ರವಂತೂ ಇನ್ನೂ ಸ್ಪಷ್ಟವಾಗಿದೆ. ಬಲಶಾಲಿಗಳು ನೀಡುವ ಹಸ್ತಲಾಘವ ಹೇಗಿರುತ್ತದೆ ಎಂಬುದಕ್ಕೆ ಈ ಫೊಟೋಗಳೇ ಸಾಕ್ಷಿಯಲ್ಲವೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News