×
Ad

ಪೊಲೀಸ್ ಕ್ರೌರ್ಯ: ಭಾರತಕ್ಕೆ ಅಮೆರಿಕ ಮಂಗಳಾರತಿ

Update: 2016-04-16 09:37 IST

ಹೊಸದಿಲ್ಲಿ: ಭಾರತದಲ್ಲಿ ನಡೆಯುತ್ತಿರುವ ನ್ಯಾಯಬಾಹಿರ ಹತ್ಯೆ ಹಾಗೂ ಕಾನೂನುಬಾಹಿರವಾಗಿ ಪೊಲೀಸ್ ಇಲಾಖೆ ಆರೋಪಿಗಳ ಸಾವಿಗೆ ಕಾರಣಾಗುತ್ತಿರುವ ಬಗ್ಗೆ ಭಾರತದ ಮಾನವಹಕ್ಕುಗಳ ಕುರಿತ 2015ರ ಅಮೆರಿಕ ವರದಿ ಕಟುವಾಗಿ ಟೀಕಿಸಿದೆ.
 ಆಂಧ್ರಪ್ರದೇಶದಲ್ಲಿ 20 ಮಂದಿ ರಕ್ತಚಂದನ ಕಳ್ಳಸಾಗಣೆದಾರರ ಸಂಶಯಾಸ್ಪದ ಸಾವಿನ ಪ್ರಕರಣವನ್ನು ವರದಿ ಉಲ್ಲೇಖಿಸಿದೆ. ಆಂಧ್ರಪ್ರದೇಶದ ವಿಶೇಷ ಕಾರ್ಯಾಚರಣೆ ಪಡೆ ಕಳೆದ ವರ್ಷದ ಎಪ್ರಿಲ್ 7ರಂದು ಗುಂಡಿನ ಚಕಮಕಿಯಲ್ಲಿ ಇವರನ್ನು ಹತ್ಯೆ ಮಾಡಿರುವ ಪ್ರಕರಣವನ್ನು ಹಾಗೂ ಅದೇ ದಿನ ತೆಲಂಗಾಣ ಪೊಲೀಸರು ನಲ್ಗೊಂಡಾದಲ್ಲಿ ಐದು ಮಂದಿ ಭಯೋತ್ಪಾದಕರನ್ನು ಜೈಲಿನಿಂದ ವಿಚಾರಣೆಗೆ ಕರೆದೊಯ್ಯುತ್ತಿದ್ದ ವೇಳೆ ಗುಂಡಿಟ್ಟು ಹತ್ಯೆ ಮಾಡಿದ್ದ ಪ್ರಕರಣವನ್ನು ಉಲ್ಲೇಖಿಸಿದೆ. ಈ ಎರಡೂ ಪ್ರಕರಣಗಳನ್ನೂ ಪ್ರತ್ಯೇಕ ವಿಶೇಷ ತನಿಖಾ ತಂಡಗಳು ತನಿಖೆ ನಡೆಸುತ್ತಿವೆ.
ದೇಶದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆಯಡಿ ಬಂಧಿಸಿದ 14 ಮಂದಿ ಸಿಮಿ ಕಾರ್ಯಕರ್ತರನ್ನು 2015ರ ಸೆಪ್ಟೆಂಬರ್ 30ರಂದು ಖಾಂಡ್ವ ನ್ಯಾಯಾಲಯ ದೋಷಮುಕ್ತಿಗೊಳಿಸಿದ ಪ್ರಕರಣವನ್ನೂ, ಕಾನೂನುಬಾಹಿರವಾಗಿ ಬಂಧಿಸುವ ಪ್ರಕರಣದ ಬಗ್ಗೆ ಉಲ್ಲೇಖಿಸಿರುವ ವರದಿಯಲ್ಲಿ ವಿವರಿಸಲಾಗಿದೆ. 2001ರಿಂದ 2012ರವರೆಗೆ ಮಧ್ಯಪ್ರದೇಶದಲ್ಲಿ 75 ಇಂಥ ಪ್ರಕರಣಗಳು ನಡೆದಿವೆ ಎಂದು ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರೆಟಿಕ್ ರೈಟ್ಸ್ ಹಾಗೂ ಜಾಮಿಯಾ ಟೀಚರ್ಸ್‌ ಸಾಲಿಡಾರಿಟಿ ಅಸೋಸಿಯೇಶನ್ ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News