ಜಗತ್ತಿನ ಈ ಅತೀ ಎತ್ತರದ ವ್ಯಕ್ತಿ ಇನ್ನಿಲ್ಲ
ಹೊಸದಿಲ್ಲಿ, ಎ. 16: ಜಗತ್ತಿನ ಅತಿ ಎತ್ತರದ ವ್ಯಕ್ತಿಯೆನ್ನಲಾದ ಜೆಕ್ ರಿಪಬ್ಲಿಕ್‌ನ ಥಾಮಸ್ ಎರಡು ದಿನ ಮೊದಲು ನಿದ್ದೆ ಸ್ಥಿತಿಯಲ್ಲಿ ಮರಣವಪ್ಪಿರುವುದಾಗಿ ವರದಿಯಾಗಿದೆ.
ಹೃದಯಾಘಾತದಿಂದ ಅವರು ತೀರಿಕೊಂಡಿದ್ದು, ಅವರ ಎತ್ತರದ ದೇಹದ ಕಾರಣದಿಂದಾಗಿ ಸಾವು ಸಂಭವಿಸಿದೆ ಎನ್ನಲಾಗಿದೆ.
ಥಾಮಸ್ ಏಳು ಅಡಿ 4.2 ಇಂಚು ಎತ್ತರವಾಗಿದ್ದರು. ಈ ಅಸಾಧಾರಣ ಎತ್ತರದಿಂದಾಗಿ ಅವರು ಅನೇಕ ರೋಗಗಳಿಗೆ ಗುರಿಯಾಗಿದ್ದರು. ಇತ್ತೀಚೆಗೆ ಥಾಮಸ್, ಸಲ್ಮಾಹಯೇಕ್‌ರ ಜೊತೆ ಒಂದು ಫ್ಯಾಂಟಸಿ ಸಿನೆಮಾದಲ್ಲಿ ನಟಿಸಿದ್ದರು. ಥಾಮಸ್ ಕೇವಲ 38 ವರ್ಷ ಪ್ರಾಯದಲ್ಲಿಯೇ ನಿಧನರಾಗಿದ್ದಾರೆ. ಜೆಕ್‌ರಿಪಬ್ಲಿಕ್‌ನ ರೋಜ್‌ಕೊಸ್‌ನಲ್ಲಿರುವ ಕಟ್ಟಡದ ಪ್ರಥಮ ಮಹಡಿಯಿಂದ ಅವರ ದೇಹವವನ್ನು ಕೆಳಗೆ ತರಲು ಸಂಬಂಧಿಕರು ತುಂಬ ಕಷ್ಟಪಟ್ಟರೆಂದು ವರದಿಗಳು ತಿಳಿಸಿವೆ. ಅವರ ಗಾತ್ರದ ಶವಪೆಟ್ಟಿಗೆ ಆಸುಪಾಸಿನಲ್ಲೆಲ್ಲೂ ಇರಲಿಲ್ಲ ಎಂದು ಹೇಳಲಾಗಿದೆ. ಆದ್ದರಿಂದ ಅವರ ಮೃತದೇಹವನ್ನು ಭೂಮಿಯಲ್ಲಿ ದಫನಗೈಯ್ಯಲು ನಿರ್ಧರಿಸಲಾಯಿತು. ಹದಿನಾಲ್ಕು ವರ್ಷದವರೆಗೆ ಥಾಮಸ್ ಸಾಮನ್ಯ ಮಕ್ಕಳಂತೆ ಇದ್ದರು. ಆನಂತರ ಅವರ ಶರೀರ ಶೀಘ್ರ ಬೆಳವಣಿಗೆಯಾಯಿತು ಎಂದು ವರದಿಗಳು ತಿಳಿಸಿವೆ.