×
Ad

ನ್ಯಾಯಾಂಗದ ಚುರುಕುತನ ಸಂವಿಧಾನವನ್ನು ದುರ್ಬಲಗೊಳಿಸಬಾರದು: ಪ್ರಣವ್ ಮುಖರ್ಜಿ

Update: 2016-04-16 23:40 IST

ಭೋಪಾಲ, ಎ.16: ನ್ಯಾಯಾಂಗ ಚುರುಕು ತನವು ಅಧಿಕಾರಗಳನ್ನು ದುರ್ಬಲಗೊಳಿಸು ತ್ತದೆಂದು ಎಚ್ಚರಿಕೆ ನೀಡಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗ ಸಂಸ್ಥೆಗಳ ನಡುವೆ ಸಮತೋಲನವಿರಬೇಕೆಂದು ಹೇಳಿದ್ದಾರೆ.

ಭೋಪಾಲ್ ರಾಷ್ಟ್ರೀಯ ನ್ಯಾಯಾಂಗ ಅಕಾಡಮಿಯಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ 4ನೆ ಬಿಳ್ಕೊಡುಗೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಸಂವಿಧಾನವು ಪರಮೋಚ್ಚವಾದುದು. ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಯಮ ಅಗತ್ಯ ಎಂದರು.

ನಮ್ಮ ಪ್ರಜಾಪ್ರಭುತ್ವದ ಪ್ರತಿಯೊಂದು ಅಂಗವೂ ತನ್ನದೇ ಆದ ವರ್ತುಲದೊಳಗೆ ಕಾರ್ಯಾಚರಿಸಬೇಕು. ಇತ ರರಿಗೆ ನಿಯೋಜಿಸಿರುವ ಕೆಲಸವನ್ನು ಅದು ವಹಿಸಿ ಕೊಳ್ಳಬಾರದು. ನಮ್ಮ ಸಂವಿಧಾನದಲ್ಲಿ ಸರಕಾರದ ಮೂರು ಅಂಗಗಳ ನಡುವಿನ ಅಧಿಕಾರ ಸಮತೋಲನವನ್ನು ಕಾಪಾಡಿಕೊಳ್ಳಬೇಕೆಂದು ಮುಖರ್ಜಿ, ಸಂವಿಧಾನವು ಒಂದು ಜೀವಂತ ದಾಖಲೆಯಾಗಿದೆ. ಸಾಮಾಜಿಕ-ಆರ್ಥಿಕ ಪರಿವರ್ತನೆಯ ಮ್ಯಾಗ್ನಾ ಕಾರ್ಟಾ ಆಗಿದೆ ಯೆಂದು ಹೇಳಿದರು.

ನ್ಯಾಯಾಂಗದ ಪಾತ್ರವು ಪವಿತ್ರವಾದುದು ಎಂದ ರಾಷ್ಟ್ರಪತಿ, ಸಾಮಾನ್ಯ ಕಾನೂನಿನ ತತ್ತ್ವಗಳನ್ನು ಜನ ಸಾಮಾನ್ಯರಿಗೂ ವಿಸ್ತರಿಸಿದಕ್ಕಾಗಿ ಅದನ್ನು ಶ್ಲಾಘಿಸಿದರು. ಆದರೆ, ನ್ಯಾಯಾಂಗ ಚುರುಕುತನವು ಅಧಿಕಾರ ವಿಭಜನೆಯನ್ನು ದುರ್ಬಲ ಗೊಳಿಸಬಾರದೆಂದು ಅವರು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News