×
Ad

ಯುದ್ಧರಂಗಕ್ಕೆ ಇನ್ನು ಅಮೆರಿಕನ್ ಮಹಿಳೆಯರೂ ಧುಮುಕಲಿದ್ದಾರೆ

Update: 2016-04-17 13:56 IST

ವಾಷಿಂಗ್ಟನ್, ಎಪ್ರಿಲ್ 17: ಕರಯುದ್ಧ ಯೋಧಾಳುಗಳಾಗಲು 22 ಮಹಿಳೆಯರಿಗೆ ಅನುಮತಿ ನೀಡಿ ಅಮೆರಿಕದ ಸೈನ್ಯ ಅತಿಪ್ರಮುಖ ನಿರ್ಧಾರ ತಳೆದಿದೆ. ಪುರುಷರ ಕ್ಷೇತ್ರವಾಗಿದ್ದ ಭೂಯುದ್ಧದಲ್ಲಿ ಮತ್ತು ಸಶಸ್ತ್ರ ಸೇನೆಯಲ್ಲಿ ಈ ಮಹಿಳೆಯರು ಸೇವೆ ಸಲ್ಲಿಸಲಿದ್ದಾರೆ. ಪ್ರಸ್ತುತ ಇವರು ಅಮೆರಿಕ ಸೈನಿಕ ಅಕಾಡಮಿಯಲ್ಲಿ ಸೆಕೆಂಡ್ ಲೆಫ್ಟಿನೆಂಟ್‌ ತರಬೇತಿ ಪಡೆಯುತ್ತಿದ್ದಾರೆ. ಕೂಡಲೇ ಇವರ ತರಬೇರ್ತಿ ಪೂರ್ತಿಯಾಗಲಿದೆ. ನಂತರ ಅವರನ್ನು ಹೊಸಕ್ಷೇತ್ರಗಳಲ್ಲಿ ನೇಮಿಸಲಾಗುವುದು ಎಂದು ಸೈನಿಕ ಮೂಲಗಳು ತಿಳಿಸಿವೆಯೆಂದು ವರದಿಯಾಗಿದೆ.

ಮಹಿಳೆಯರಿಗೆ ರಿಸರ್ವ್ ಆಫೀಸರ್ ಟ್ರೈನಿಂಗ್ ಕಾರ್ಪ್ಸಿಲ್‌ನಿಂದ ಆರ್ಮಿ ಆಫೀಸರ್ ಕ್ಯಾಂಡಿಡೇಟ್ ಸ್ಕೂಲ್‌ನಿಂದ ತರಬೇತಿ ನೀಡಲಾಗುತ್ತಿದೆ. ಕರಸೇನೆಯಲ್ಲಿ ಒಂಬತ್ತು ಮಂದಿಗೆ, ಸಶಸ್ತ್ರ ಸೇನೆಯಲ್ಲಿ 13 ಮಂದಿಗೆ ನೇಮಕಾತಿ ಲಭಿಸಲಿದೆ. ಪ್ರಸ್ತುತಯುದ್ಧ ರಂಗದಲ್ಲಿ ಸೇವೆ ಸಲ್ಲಿಸಲು ಬರುವ ಮಹಿಳೆಯ ಸಂಖ್ಯೆ ಬಹಳ ಕಡಿಮೆ ಇದೆ. ಇವರನ್ನು ಮಾದರಿಯಾಗಿಟ್ಟು ಹೆಚ್ಚು ಮಹಿಳೆಯರು ಈ ರಂಗಕ್ಕೆಬರಲಿದ್ದಾರೆಂದು ಯುಎಸ್ ಸೇನೆ ನಿರೀಕ್ಷೆ ವ್ಯಕ್ತಪಡಿಸಿದೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News