×
Ad

ಚಾಟಿಂಗ್‌ನಲ್ಲಿ ಬೇಹುಗಾರಿಕೆ: ಸೈನಿಕರಿಗೆ ಎಚ್ಚರಿಕೆಯಿಂದಿರಲು ನಿರ್ದೇಶನ

Update: 2016-04-17 13:59 IST

ಹೊಸದಿಲ್ಲಿ, ಎಪ್ರಿಲ್17: ಫೇಸ್‌ಬುಕ್‌ನಲ್ಲಿ ಮತ್ತು ಇತರ ಚಾಟಿಂಗ್ ಆ್ಯಪ್‌ಗಳಲ್ಲಿ ಅಪರಿಚಿತರು ವಿಶೇಷತಃ ಮಹಿಳೆಯರು ಸೌಹಾರ್ದವನ್ನು ತೋರಿಸಿದರೆ ಸ್ವೀಕರಿಸಬಾರದೆಂದು ಸೈನಿಕರಿಗೆ ಸೂಚಿಸಲಾಗಿದೆ ಎಂದು ವರದಿಯಾಗಿದೆ. ಮಹಿಳೆಯರನ್ನು ಬಳಸಿ ಶತ್ರು ರಾಷ್ಟ್ರಗಳು ಮಾಹಿತಿ ಸೋರಿಕೆ ನಡೆಸುವುದು ಪತ್ತೆಯಾಗಿರುವುದರಿಂದ ಅಪರಿಚಿತರಿಂದ ಸೌಹಾರ್ದದ ಮಾತುಕತೆಗಳಲ್ಲಿ ಎಚ್ಚರಿಕೆ ವಹಿಸಬೇಕೆಂದು ಗೃಹಸಚಿವಾಲಯ ಸೂಚಿಸಿದೆ.

ಫೇಸ್‌ಬುಕ್ ಮೂಲಕ ಸೈನಿಕರೊಂದಿಗೆ ಗೆಳೆತನ ಸ್ಥಾಪಿಸುವ ಮಹಿಳೆಯರಲ್ಲಿ ಹಲವರು ಬೇಹುಗಾರಿಕೆ ಶೃಂಲೆಯ ಕೊಂಡಿಗಳಾಗಿದ್ದಾರೆ. ಮೊಬೈಲ್ ಫೋನ್ ಮೂಲಕ, ಚಾಟಿಂಗ್ ಮೂಲಕ ಜಿಪಿಎಸ್ ಲೋಕೇಶನ್ ಫೋನ್ ಮಾಹಿತಿಗಳು, ಎಸ್‌ಎಂಎಸ್‌ಗಳಿವೆ ಮುಂತಾದವುಗಳನ್ನು ಸೋರಿಕೆ ಮಾಡುವ ಪರಿಣತರು ಇವರು. ಸೈನ್ಯದ ಪ್ರಧಾನ ಮಾಹಿತಿಗಳು ಹೀಗೆ ಶತ್ರುಗಳಿಗೆ ಲಭಿಸುತ್ತಿವೆ ಎಂದು ಸಂದೇಹಿಸಿರುವ ಹಿನ್ನೆಲೆಯಲ್ಲಿ ಕಠಿಣ ನಿಲುವು ಕೈಗೊಳ್ಳಲಾಗಿದೆ. ಪಠಾಣ್‌ಕೋಟ್ ಆಕ್ರಮಣಕ್ಕೆ ಕೆಲವು ದಿವಸ ಮೊದಲು ಇಂತಹ ಒಂದು ಘಟನೆಯು ಪತ್ತೆಯಾಗಿತ್ತು ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News