×
Ad

ಇಬ್ಬರು ರಾ ಏಜೆಂಟ್ ರನ್ನು ಬಂಧಿಸಿದ್ದೇವೆ ಎಂದ ಪಾಕಿಸ್ತಾನ!

Update: 2016-04-17 15:58 IST

ಇಸ್ಲಾಮಾಬಾದ್, ಎಪ್ರಿಲ್ 7: ಪಾಕಿಸ್ತಾನವು ರವಿವಾರ ದಕ್ಷಿಣ ಸಿಂಧ್ ಪ್ರಾಂತದಲ್ಲಿ ರಾದ ಇಬ್ಬರು ಏಜೆಂಟ್‌ರನ್ನು ಬಂಧಿಸಿದೆ ಹೇಳಿಕೊಂಡಿದೆ. ನ್ಯೂಸ್ ಇಂಟರ್‌ನೇಶನಲ್ ವರದಿ ಮಾಡಿರುವ ಪ್ರಕಾರ ಭಯೋತ್ಪಾದನೆ ವಿರೋಧ ವಿಭಾಗದ ನವೀದ್ ಖ್ವಾಜ ಗುಪ್ತ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಿ ಥೂಟ್ಟಾ ಎಂಬಲ್ಲಿಂದ ಇಬ್ಬರು ರಾ ಏಜೆಂಟ್‌ಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಬಂಧಿತ ಏಜೆಂಟ್‌ಗಳ ಹೆಸರನ್ನು ಸದ್ದಾಮ್ ಹುಸೈನ್ ವತ್ತು ಬಚಾಲ್ ಎಂದು ಖ್ವಾಜ ತಿಳಿಸಿದ್ದು ಈ ಪ್ರದೇಶದಲ್ಲಿ ಮೀನುಗಾರರ ವೇಷದಲ್ಲಿ ರಿಸರ್ಚ್ ಆಂಡ್ ಎನಾಲಿಸಿಸ್ ವಿಂಗ್‌ಗಾಗಿ ಕೆಲಸಮಾಡುತ್ತಿದ್ದರು ಎಂದಿದ್ದಾರೆ. ಈ ಪಾಕಿಸ್ತಾನಿ ಪೊಲೀಸ್ ಅಧಿಕಾರಿ ತಿಳಿಸಿದಂತೆ ಬಂಧಿತರಾದ ಇಬ್ಬರಿಗೂ ಭಾರತ ಕೋಡ್ ಸೌಕರ್ಯವನ್ನು ಒದಗಿಸಿತ್ತು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News