×
Ad

ಬಿಹಾರದ ಛಪರಾಕೋರ್ಟ್‌ನಲ್ಲಿ ಬಾಂಬ್‌ಸ್ಫೋಟ: 6 ಮಂದಿ ಗಾಯ

Update: 2016-04-18 14:55 IST

ಬಿಹಾರ, ಎಪ್ರಿಲ್ 18: ಇಲ್ಲಿನ ಛಾಪರಾ ಕೋರ್ಟ್ ಪರಿಸರದಲ್ಲಿ ಬಾಂಬ್ ಸ್ಫೋಟವಾಗಿದ್ದು ಅಲ್ಲೋಲಕಲ್ಲೋಲ ಸ್ಥಿತಿ ಸೃಷ್ಟಿಯಾಗಿದೆ. ನಕಲು ನವೀಸಿ ವಿಭಾಗದ ಎದುರುಭಾಗ ಮತ್ತು ಸಬ್ ಜಡ್ಜ್ ಕಚೇರಿಯ ಹಿಂದಿರುವ ಪೋರ್ಟಿಕೊದ ಕೆಳಗೆ ಬಾಂಬ್ ದಾಳಿಯಲ್ಲಿ ಇಬ್ಬರು ಮಹಿಳೆಯರು, ಒಂದು ಮಗು ಸಹಿತ ಆರು ಮಂದಿ ಗಾಯಗೊಂಡಿದ್ದಾರೆಂದು ವರದಿಯಾಗಿದೆ.

ಇವರಲ್ಲಿ ಓರ್ವ ಮಹಿಳೆಯ ಪರಿಸ್ಥಿತಿ ಗಂಭೀರವಾಗಿದೆ. ಅವರನ್ನು ಗಂಭೀರಸ್ಥಿತಿಯಲ್ಲಿ ಪಾಟ್ನಕ್ಕೆ ಕರೆದೊಯ್ಯಲು ಶಿಫಾರಸು ಮಾಡಲಾಗಿದೆ. ಇನ್ನು ಮೂವರು ಸಾಮಾನ್ಯ ಗಾಯಗಳೊಂದಿಗೆ ಪಾರಾಗಿದ್ದಾರೆ. ಬಾಂಬ್ ಸ್ಫೋಟದ ನಂತರ ಕೋರ್ಟ್ ಕ್ಯಾಂಪಸ್‌ನಲ್ಲಿ  ಲ್ಲೋಲಕಲ್ಲೋಲವುಂಟಾಗಿತ್ತು. ಜನರು ಅತ್ತಿತ್ತ ಓಡಿದರು. ಪ್ರತ್ಯಕ್ಷದರ್ಶಿಗಳು ಹೇಳಿರುವ ಪ್ರಕಾರ ಬುರ್ಕಾಧರಿಸಿದ್ದ ಇಬ್ಬರು ಮಹಿಳೆಯರು ಕೋರ್ಟ್‌ಗೆ ಬೆಳಗ್ಗೆ ಬಂದಿದ್ದರು ಮತ್ತು ಅವರು ಬಂದ ಕೆಲವೇ ಸಮಯದಲ್ಲಿ ಬಾಂಬ್ ಸ್ಫೋಟವಾಗಿತ್ತು. ಇವರಲ್ಲಿ ಒಬ್ಬಳು ಮಹಿಳೆ ಬಾಂಬ್ ಸ್ಫೋಟವಾಗುವ ಸ್ವಲ್ಪಮೊದಲು ಕೋರ್ಟ್ ಕ್ಯಾಂಪಸ್‌ನಲ್ಲಿರುವ ಮಂದಿರದಲ್ಲಿ ಕೂತಿರುವುದನ್ನು ನೋಡಿದವರಿದ್ದಾರೆ. ಕೆಲವು ಮಂದಿ ಇದನ್ನು ಮಾನವಬಾಂಬು ದಾಳಿ ಎನ್ನುತ್ತಿದ್ದಾರೆ. ಈ ಘಟನೆಯಲ್ಲಿ ಮಹಿಳೆಯೂ ಗಾಯಗೊಂಡಿದ್ದಾರೆ.

ಪೊಲೀಸರು ಹೇಳಿರುವ ಪ್ರಕಾರ ಗಾಯಾಳು ಖುಶ್ಬೂ ಕುಮಾರಿ ಅವತಾರ್ ನಗರ ಠಾಣೆ ವ್ಯಾಪ್ತಿಯ ಝೈಆ ಬಸಂತ್ ಗ್ರಾಮದ ನಿವಾಸಿ ಬಾಲೇಶ್ವರ್ ಸಿಂಗ್‌ರ ಪುತ್ರಿಯಾಗಿದ್ದಾಳೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಅವಳನ್ನು ಪಾಟ್ನಾಕ್ಕೆ ಕರೆದೊಯ್ಯಲಾಗಿದೆ. ಇವಳೇ ಬಾಂಬ್‌ನ್ನು ತನ್ನಸೊಂಟದಲ್ಲಿ ರಿಬ್ಬನ್‌ನಲ್ಲಿ ಕಟ್ಟಿರಿಸಿದ್ದಳೆಂದು ಅನುಮಾನಿಸಲಾಗಿದೆ. ಸ್ಪೋಟದ ನಂತರ ಅವಳ ಕಾಲು ತೀವ್ರವಾಗಿ ಜಖಂ ಆಗಿದೆ. ಮಹಿಳೆ ಎರಡು ಕಾಲುಗಳ ನಡುವೆ ಬಾಂಬ್‌ನ್ನು ಅಡಗಿಸಿಟ್ಟಿದ್ದಳು ಆಗ ಬಾಂಬ್ ಸ್ಪೋಟವಾಯಿತು ಎನ್ನಲಾಗುತ್ತಿದೆ. ಪೊಲೀಸರು ಘಟನಾ ಸ್ಥಳದಲ್ಲಿ ಎರಡು ಬೈಕ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ. ಬೈಕ್‌ನಲ್ಲಿ ಸಿಕ್ಕಿದ ಕಾಗದ ಪತ್ರಗಳ ಪರಿಶೀಲನೆ ನಡೆಸುತ್ತಿದ್ದಾರೆ. ಇದಕ್ಕಿಂತ ಮೊದಲು 2014ರಲ್ಲಿಯೂ ಕೋರ್ಟ್ ಕ್ಯಾಂಪಸ್‌ನಲ್ಲಿ ಬಾಂಬ್ ಸ್ಫೋಟವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News