ಲಂಡನ್: ರೈಲು ಢಿಕ್ಕಿ ಹೊಡೆದು ಭಾರತೀಯ ವಿದ್ಯಾರ್ಥಿ ಸಾವು
ಲಂಡನ್, ಎ. 18: ಆಸ್ಟರ್ಲೆ ರೈಲು ನಿಲ್ದಾಣದಲ್ಲಿ ಎಪ್ರಿಲ್ 12ರಂದು ಲಂಡನ್ ಭೂಗತ ರೈಲೊಂದು ಢಿಕ್ಕಿಯಾಗಿ ಹೈದರಾಬಾದ್ ನಿವಾಸಿ ಮಿರ್ ಬಾಕರ್ ಅಲಿ ರಿಝ್ವಿ ಮೃತಪಟ್ಟಿದ್ದಾರೆ ಎಂಬುದಾಗಿ ಸೋಮವಾರ ಘೋಷಿಸಲಾಗಿದೆ.
33 ವರ್ಷದ ರಿಝ್ವಿಯ ಸಾವನ್ನು ಸಂಶಯಾಸ್ಪದವಾಗಿ ಪರಗಣಿಸಲಾಗಿಲ್ಲ ಎಂದು ಬ್ರಿಟಿಶ್ ಸಾರಿಗೆ ಪೊಲೀಸ್ ಹೇಳಿದ್ದಾರೆ. ಅವರು ಬ್ರಿಟನ್‌ನಲ್ಲಿ 2009ರಿಂದ ಇದ್ದರು ಹಾಗೂ ಹೀತ್ರೂ ವಿಮಾನ ನಿಲ್ದಾಣದ ಸಮೀಪ ಅಪಘಾತ ನಡೆದ ವೇಳೆ ಎಂಬಿಎ ವಿದ್ಯಾರ್ಥಿಯಾಗಿದ್ದರು ಎಂದು ಖಚಿತಪಡದ ಮೂಲಗಳು ತಿಳಿಸಿವೆ.
‘‘ವ್ಯಕ್ತಿಯೋರ್ವರಿಗೆ ರೈಲು ಢಿಕ್ಕಿ ಹೊಡೆದಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಎಪ್ರಿಲ್ 12ರಂದು ರಾತ್ರಿ 7.45ಕ್ಕೆ ನಮ್ಮನ್ನು ಆಸ್ಟರ್ಲೆ ರೈಲು ನಿಲ್ದಾಣಕ್ಕೆ ಕರೆಸಲಾಯಿತು. ಮೆಟ್ರೊಪಾಲಿಟನ್ ಪೊಲೀಸ್ ಸರ್ವಿಸ್, ಲಂಡನ್ ಆ್ಯಂಬುಲೆನ್ಸ್ ಸರ್ವಿಸ್ ಮತ್ತು ಲಂಡನ್ ಅಗ್ನಿಶಾಮಕ ದಳದ ಸಿಬ್ಬಂದಿಯೂ ಸ್ಥಳದಲ್ಲಿದ್ದರು. 33 ವರ್ಷದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂಬುದಾಗಿ ಘೋಷಿಸಲಾಯಿತು’’ ಎಂದು ಬಿಟಿಪಿ ವಕ್ತಾರರೋರ್ವರು ತಿಳಿಸಿದರು.
ಅಪಘಾತದ ಮಾಹಿತಿಯನ್ನು ಭಾರತೀಯ ಅಧಿಕಾರಿಗಳು ಮತ್ತು ಹೈದರಾಬಾದ್‌ನಲ್ಲಿರುವ ರಿಝ್ವಿಯ ಕುಟುಂಬಕ್ಕೆ ತಿಳಿಸಲಾಗಿದೆ.