×
Ad

ಐಎಎಸ್-ಐಪಿಎಸ್ ಕೇಡರ್ ವರ್ಗಾವಣೆ ನೀತಿ ರಚಿಸಲು ಚಿಂತನೆ

Update: 2016-04-18 22:09 IST

 ಹೊಸದಿಲ್ಲಿ, ಎ.18: ಈಗಿರುವ ನೀತಿಯ ಕಾರಣದಿಂದ ಒಂದೇ ರಾಜ್ಯಕ್ಕೆ ವರ್ಗಾವಣೆ ಪಡೆಯಲು ಕಷ್ಟ ಎದುರಿಸುತ್ತಿರುವ ಐಎಎಸ್-ಐಪಿಎಸ್ ದಂಪತಿಯೊಂದು ಗುಜರಾತ್ ಕೇಡರ್‌ನ್ನು ಆಯ್ಕೆ ಮಾಡಿಕೊಂಡಿದೆ.

2011ನೆ ಬ್ಯಾಚ್‌ನ ಐಎಎಸ್ ಅಧಿಕಾರಿ, ತಮಿಳುನಾಡಿನ ಪಿ.ಪಾರ್ಥಿವನ್ ಹಾಗೂ ಅವರ ಪತ್ನಿ, ಬ್ಯಾಚ್ ಮೇಟ್ ದಿಲ್ಲಿ ಮೂಲದ ತಮಿಳು ನಾಡು ಕೇಡರ್‌ನ ಐಪಿಎಸ್ ಅಧಿಕಾರಿಣಿ ನಿಶಾ ಎಂಬವರ ಪ್ರಕರಣ ಇದಾಗಿದೆ. ಪಾರ್ಥಿವನ್ ದಿಲ್ಲಿ ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳ ಕೇಡರ್‌ನವರಾಗಿದ್ದಾರೆ.
ಈ ಇಬ್ಬರ ತಮ್ಮ ವಿವಾಹವನ್ನು ಅನುಲಕ್ಷಿಸಿ ಸಮಾನ ಕೇಡರ್‌ನ್ನು ಬಯಸಿದ್ದರು. ನಾಗರಿಕ ಸೇವಾ ನಿಯಮಗಳಲ್ಲಿ ಅದಕ್ಕೆ ಅವಕಾಶವಿದೆ. ಆದರೆ, ಸೇನೆಯ ಯಾವನೇ ಅಥವಾ ಯಾವಳೇ ಸದಸ್ಯ-ಸದಸ್ಯೆ ಅವನ ಅಥವಾ ಅವಳ ತವರು ರಾಜ್ಯದಲ್ಲಿ ಕೆಲಸ ಮಾಡುವುದನ್ನು ನಿಯಮ ನಿಷೇಧಿಸಿದೆ.
ಈ ಪ್ರಕರಣವು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಕಾರ್ಯದರ್ಶಿ ಸಂಜಯ ಕೊಠಾರಿ ನೇತೃತ್ವದ ಸಮಿತಿಯೊಂದರ ಪರಿಶೀಲನೆಯಲ್ಲಿತ್ತು. ಆ ಸಮಿತಿ ಈಗಿರುವ ಮಾರ್ಗ ಸೂತ್ರಗಳಲ್ಲಿ ಅಗತ್ಯ ಸಡಿಲಿಕೆ ಮಾಡಿ ಕೇಡರ್‌ಗಳ ನಡುವೆ ವರ್ಗಾವಣೆಯ ಪ್ರಕರಣಗಳನ್ನು ನಿರ್ಧರಿಸುತ್ತದೆ.
ಕಳೆದ ವಾರ ನಡೆದ ಸಭೆಯಲ್ಲಿ ಸಮಿತಿಗೆ, ಪಾರ್ಥಿವನ್ ಹಾಗೂ ನಿಶಾ ಕೇಡರ್ ಬದಲಾವಣೆಗೆ ಗುಜರಾತನ್ನು ಆರಿಸಿದ್ದಾರೆಂದು ತಿಳಿಸಲಾಯಿತೆಂದು ಸಭೆಯ ನಡಾವಳಿ ಹೇಳಿದೆ.
ವಿಸ್ತೃತ ಚರ್ಚೆಯ ಬಳಿಕ ಸಮಿತಿಯು, ಅಂತಹ ಪ್ರಕರಣಗಳಲ್ಲಿ ಕೇಡರ್ ವರ್ಗಾವಣೆಯ ನೀತಿಯನ್ನು ಮೊದಲು ರಚಿಸಬೇಕೆಂದು ನಿರ್ದೇಶನ ನೀಡಿತೆಂದು ಅದು ತಿಳಿಸಿದೆ.

ಕೇಡರ್ ಮಂಜೂರಾತಿಯ ಕುರಿತು ಅಂತಿಮ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದ ನೇಮಕಾತಿ ಸಮಿತಿ ಅನುಮೋದಿಸಬೇಕಾಗಿದೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News