ಕಾಬೂಲ್; ಯುಎಸ್ ರಾಯಭಾರಿ ಕಚೇರಿ ಬಳಿ ಆತ್ಮಾಹುತಿ ಬಾಂಬ್ ದಾಳಿ; 24 ಸಾವು
Update: 2016-04-19 11:37 IST
ಕಾಬೂಲ್, ಎ.19: ಅಫ್ಘಾನಿಸ್ತಾನದ ರಾಜದಾನಿ ಕಾಬೂಲ್‌ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿ ಬಳಿ ಇಂದು ಬೆಳಗ್ಗೆ ನಡೆದ ಆತ್ಮಾಹುತಿ ಬಾಂಬ್ ದಾಳಿಯ ಪರಿಣಾಮವಾಗಿ 24ಮಂದಿ ಸಾವಿಗೀಡಾಗಿದ್ಧಾರೆ. ಹಲವು ಮಂದಿ ಗಾಯಗೊಂಡಿದ್ದಾರೆ.
ಭಯೋತ್ಪಾದಕರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಿಂದ ಯುಎಸ್ ರಾಯಭಾರಿ ಕಚೇರಿ ಮತ್ತು ಸಮೀಪದಲ್ಲಿ ನ್ಯಾಟೊ ಕಚೇರಿಗೆ ಹಾನಿಯಾಗಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಬಾಂಬ್ ಸ್ಫೋಟಗೊಂಡಿರುವ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದೆ. ರಾಯಭಾರಿ ಕಚೇರಿಯ ಹೊರಗೆ ಸೈರನ್ ಸದ್ದು ಕೇಳಿ ಬರುತ್ತಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ