×
Ad

ಹಿಂದೂಗಳು ಸಾಮಾಜಿಕ ಕೆಡುಕನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಾರೆ, ಮುಸ್ಲಿಮರು ಹಾಗೆ ಮಾಡುವುದಿಲ್ಲ

Update: 2016-04-19 12:14 IST

ಹೊಸದಿಲ್ಲಿ, ಎಪ್ರಿಲ್ 19: ಆರೆಸ್ಸೆಸ್ ಮುಖ ಪತ್ರಿಕೆ ಪಾಂಚಜನ್ಯ ಡಾ| ಬಿ.ಆರ್ ಅಂಬೇಡ್ಕರ್‌ರನ್ನು ಕೇವಲ ದಲಿತ ನಾಯಕ ಎಂಬ ನೆಲೆಯಲ್ಲಿ ಪ್ರಸ್ತುತ ಪಡಿಸುವ ಪ್ರವೃತ್ತಿಯನ್ನು ಟೀಕಿಸಿದ್ದು ಪತ್ರಿಕೆ ಪ್ರಕಾರ ಅಂಬೇಡ್ಕರ್ ಓರ್ವ ರಾಷ್ಟ್ರವಾದಿಯಾಗಿದ್ದರು ಎಂದು ಅದು ಹೇಳಿದೆ. ಅವರು ಯೋಚಿಸಿಯೇ ಪಾಶ್ಚಾತ್ಯ ವಿಚಾರಗಳು, ಸಂಘಟನೆಗಳುಮ ಮತ್ತು ಪ್ರಭಾವಗಳಿಂದ ತನ್ನನ್ನು ದೂರ ಇರಿಸಿದ್ದಾರೆ. ಅಂಬೇಡ್ಕರ್ ಹಿಂದೂ ತನ್ನ ಸಮಾಜದಲ್ಲಿ ಹರಡಿಕೊಂಡ ಕೆಡುಕನ್ನು ಕೊನೆಗೊಳಿಸಲು ಕೆಲಸ ಮಾಡುತ್ತಿದ್ದಾನೆ ಅದೇ ವೇಳೆ ಮುಸ್ಲಿಮ್ ಹಾಗೆ ಮಾಡುವುದಿಲ್ಲ ಎಂದು ಹೇಳಿರುವುದಾಗಿ ಆ ಪತ್ರಿಕೆ ಹೇಳಿಕೊಂಡಿದೆ.

ಲೇಖನದಲ್ಲಿ ಅಂಬೇಡ್ಕರ್‌ಗಳ ಕೆಲಸಗಳನ್ನು ಸ್ಮರಿಸುತ್ತಾ ಅಮೆರಿಕದ ಲೇಖಕ ಕ್ಯಾಥರಿನ್ ಮಾಯೊ ಒಂದು ಗ್ರಂಥದಲ್ಲಿ ಹಿಂದೂ ಧರ್ಮದಲ್ಲಿ ಜಾತಿ ಭೇದಭಾವಗಳು ತುಂಬಿಕೊಂಡಿವೆ ಇಸ್ಲಾಮ್‌ನಲ್ಲಿ ಸಾಹೋದರ್ಯಕ್ಕೆ ಅನುಮತಿ ಎಂದು ಬರೆದಿದ್ದರು. ಇದನ್ನು ಅಂಬೇಡ್ಕರ್ ಖಂಡಿಸಿ ಇಸ್ಲಾಮ್‌ನಲ್ಲಿ ಗುಲಾಮತ್ವ ಮತ್ತುದಾಸ್ಯತನ ಇದೆ ಎಂದು ಸವಾಲೆಸೆದಿದ್ದರು ಎಂದು ಬರೆಯಲಾಗಿದೆ. ಲೇಖನದಲ್ಲಿ ಅಂಬೇಡ್ಕರ್‌ರ ಮಾತುಗಳನ್ನು ಕೋಟ್ ಮಾಡಲಾಗಿದ್ದು’ ಅಂಬೇಡ್ಕರ್ ಹಿಂದೂ ಧರ್ಮದಲ್ಲಿ ಕೆಡುಕುಗಳಿವೆ ಆದರೆ ಹಿಂದೂಗಳಲ್ಲಿ ಅತ್ಯಂತ ಉತ್ತಮ ವಿಷಯವೆಂದರೆ ಸಮಾಜದಲ್ಲಿ ಕೆಲವು ಮಂದಿ ತಮ್ಮ ದೌರ್ಬಲ್ಯಗಳನ್ನು ಅರಿತುಕೊಂಡಿದ್ದಾರೆಅದನ್ನು ಕೊನೆಗೊಳಿಸುವುದರಲ್ಲಿ ಸಕ್ರಿಯವಾಗಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದರೆಂದು ಬರೆಯಲಾಗಿದೆ. ಇನ್ನೊಂದು ಕಡೆ ಮುಸಲ್ಮಾನರಿಗೆ ತಮ್ಮಲ್ಲಿ ಕೆಡುಕುಗಳು ವ್ಯಾಪಿಸಿಕೊಂಡಿರುವುದು ಗೊತ್ತಿಲ್ಲ. ಆದ್ದರಿಂದ ಅದನ್ನು ಕೊನೆಗೊಳಿಸಲು ಪ್ರಯತ್ನಿಸುವುದಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರೆಂದು ಪಾಂಚಜನ್ಯ ಲೇಖನದಲ್ಲಿದೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News