ಬಿಜೆಪಿ ಸಂಸದನ ಕಪಾಳಕ್ಕೆ ಬಾರಿಸಿದ ಯುವಕ !
ಬಾರ್ಮರ್, ಎ.19:ಮದುವೆ ಸಮಾರಂಭವೊಂದರಲ್ಲಿ ಬಾರ್ಮರ್‌ನ ಲೊಕಸಭಾ ಸದಸ್ಯ ಬಿಜೆಪಿಯ ಸೋನಾರಾಮ್ ಚೌಧರಿಗೆ ಯುವಕನೊಬ್ಬ ಕೆನ್ನೆಗೆ ಹೊಡೆದಿರುವ ಘಟನೆ ಸೋಮವಾರ ನಡೆದಿದೆ.
ಮದುವೆ ಸಮಾರಂಭದಲ್ಲಿ ಸೋನಾರಾಮ್ ಚೌಧರಿ ಅವರ ಜೊತೆ ವಾಗ್ವಾದಕ್ಕಿಳಿದ ಆರೋಪಿ ಯುವಕ ಕರ್ಥಾರಾಮ್ ಎಂಬಾತನು ಸಿಟ್ಟಿನಿಂದ ಅವರ ಕೆನ್ನೆಗೆ ಹೊಡೆದು ಪರಾರಿಯಾಗುತ್ತಿದಂತೆ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಸಂಸದರ ಪಕ್ಕದಲ್ಲೇ ಇದ್ದ ಜಿಲ್ಲಾಧಿಕಾರಿ ಸುಧೀರ್ ಶರ್ಮಾ ಈ ಘಟನೆಗೆ ಮೂಕ ಸಾಕ್ಷಿಯಾದರು. ಪೂರ್ವ ದ್ವೇಷವೇ ಆರೋಪಿ ಯುವಕ ಸಂಸದರ ಕೆನ್ನೆಗೆ ಬಾರಿಸಲು ಕಾರಣ ಎಂದು ತಿಳಿದು ಬಂದಿದೆ
ಆರೋಪಿ ಯುವಕ ಕರ್ಥಾರಾಮ್ ಮತ್ತು ಆತನೊಂದಿಗಿದ್ದ ಪ್ರೇಮಾರಾಮ್ ಭಾಡು ಎಂಬಾತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ತೀವ್ರ ವಿಚಾರಣೆಗೊಳಪಡಿಸಲಾಗುವುದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ಯಾರಿಸ್ ದೇಶ್ ಮುಖ್ ತಿಳಿಸಿದ್ದಾರೆ.
ಎಂಪಿ ಸೋನಾರಾಮ್ ಅಂಗರಕ್ಷಕ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.