×
Ad

ಮದುವೆಯ ದಿನ ಬಾಡಿಗೆಯ ಫೆರಾರಿಯನ್ನು ಸ್ನೇಹಿತನ ಮನೆಗೆ ಗುದ್ದಿದ ವರ !

Update: 2016-04-19 16:02 IST

ಲಂಡನ್, ಎ. 19 : 342,000 ಡಾಲರ್ ಬೆಲೆಬಾಳುವ ಆಕರ್ಷಕ ಫೆರಾರಿ ಕಾರು, ಸೂಟು ಬೂಟಿನಲ್ಲಿ ಮಿಂಚುತ್ತಿರುವ ಮದುಮಗ ಅದನ್ನು ಚಲಾಯಿಸುತ್ತಾ ಪಕ್ಕದಲ್ಲಿ ಸುಂದರ ವಧು ಸರ್ವಾಲಂಕಾರ ಭೂಷಿತಳಾಗಿ ಕುಳಿತಿದ್ದಾಳೆ. ಇನ್ನು ಸ್ವರ್ಗಕ್ಕೆ ಮೂರೇ ಗೇಣು. ಆದರೆ ಅಲ್ಲಿ ಹಾಗಾಗಲಿಲ್ಲ. 

ಮದುವೆಗೆ ಸಂಭ್ರಮಕ್ಕೇ ಹೊಡೆತ ಬಿತ್ತು. ಬಾಡಿಗೆಗೆ ತಂದ ಸುಮಾರು ಎರಡೂ ಕಾಲು ಕೋಟಿ ರೂಪಾಯಿ ಮೌಲ್ಯದ ಫೆರಾರಿ ಕಾರನ್ನು ಮದುಮಗ ಚಲಾಯಿಸುವಾಗ ನಿಯಂತ್ರಣ ತಪ್ಪಿ ನೇರವಾಗಿ ಹೋಗಿ ಮನೆಯೊಂದಕ್ಕೆ ಅಪ್ಪಳಿಸಿದ್ದಾನೆ. ಅದೂ ತನ್ನ ಸ್ನೇಹಿತನ ಮನೆಗೆ !  ಇದು ನಡೆದಿದ್ದು ಲಂಕಾಶೈರ್ ನ ಬರ್ನ್ಲಿಯಲ್ಲಿ. 

ಪುಣ್ಯಕ್ಕೆ ವರ ಉಸ್ಮಾನ್ ಅಲಿ ಹಾಗು ವಧು ಸಕೀನಾ ಪರ್ವೀನ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಆದರೆ ವರ ಫೆರಾರಿಯನ್ನು ಬಾಡಿಗೆಗೆ ತರುವಾಗ ಇಟ್ಟ ತೇವಣಿಯಲ್ಲಿ $7,100 ( ನಾಲ್ಕೂವರೆ ಲಕ್ಷ ರೂಪಾಯಿ ) ಆತನಿಗೆ ಖೋತಾ ಆಗಲಿದೆ.  ಅಷ್ಟೇ ಅಲ್ಲ , ವಿಮೆಗಾಗಿ $28,000 ( ಹದಿನೆಂಟು ಲಕ್ಷ ರೂಪಾಯಿ ) ನೀಡಬೇಕಾಗಿದೆ. 

ಮೂರು ಸೆಕೆಂಡು ಗಳಲ್ಲಿ ಸೊನ್ನೆಯಿಂದ 60 ಕಿಮಿ ವೇಗ ಪಡೆಯುವ ಫೆರಾರಿ ಎಂದ ಮೇಲೆ ಅಷ್ಟೇ ಜಾಗರೂಕತೆ ಬೇಕೇ ಬೇಕಲ್ಲವೇ ? 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News