×
Ad

ಮಲೇರಿಯಕ್ಕೆ ಪರಿಣಾಮಕಾರಿ ಹೊಸ ಔಷಧ ಸಂಶೋಧನೆ

Update: 2016-04-19 18:06 IST

ವಾಷಿಂಗ್ಟನ್, ಎಪ್ರಿಲ್ 19: ಔಷಧಗಳನ್ನೇ ಪ್ರತಿರೋಧಿಸುವ ಮಲೇರಿಯಾ ರೋಗಾಣುಗಳ ವಿರುದ್ಧ ಔಷಧವನ್ನು ಕಂಡುಹುಡುಕುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಮೆಲ್ಬರ್ನ್‌ನ ಸಂಶೊಧಕರು ಹೇಳಿರುವುದಾಗಿ ವರದಿಯಾಗಿದೆ. ಯುನಿವರ್ಸಿಟಿ ಆಫ್ ಮೇಲ್ಬರ್ನ್ ಸ್ಕೂಲ್ ಆಫ್ ಬಯೊ ಸಯನ್ಸ್‌ನ ಜಿಯೋಫ್ ಮ್ಯಾಕ್ ಫದನ್, ಡೀನ್‌ಗುಡ್‌ಮೆನ್ ನೇತೃತ್ವದ ಸಂಶೋಧನೆಯಲ್ಲಿ ಈ ಔಷಧ ತಯಾರಿಸುವ ಸಾಧ್ಯತೆ ಕಂಡು ಹಿಡಿಯಲಾಗಿದೆ.

ಓರ್ವ ರೋಗಿಯಿಂದ ಇನ್ನೊಬ್ಬ ರೋಗಿಗೆ ಸೊಳ್ಳೆಗಳ ಮೂಲಕ ರೋಗ ಹರಡುವುದನ್ನು ತಡೆಯುತ್ತದೆ ಎಂಬುದು ಹೊಸ ಔಷಧದ ವಿಶೇಷತೆಯೆನ್ನಲಾಗಿದೆ. ಪ್ರಸಕ್ತ ಮಲೇರಿಯ ಚಿಕಿತ್ಸೆಗೆ ಬಳಸುವ ಅಟ್ಟೋವಕ್ವಿನ್ ಎಂ ,ಔಷಧ ಪರಿಣಾಮ ಬೀರದವರಲ್ಲಿ ಈ ಹೊಸ ಔಷಧ ಪರಿಣಾಮಕಾರಿ ಎನಿಸಲಾಗಿದೆ ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ.

2000ದಲ್ಲಿ ಅಟ್ಟೋವಕ್ವಿನ್ ಎಂಬ ಔಷಧವನ್ನು ಮಲೇರಿಯ ಚಿಕಿತ್ಸೆಗೆ ಉಪಯೋಗಿಸಲು ಆರಂಭಿಸಲಾಗಿತ್ತು. ಶಿಶುಗಳಲ್ಲಿ ಮತ್ತುಗರ್ಭಿಣಿಯರಲ್ಲಿ ಸುರಕ್ಷಿತವಾಗಿ ಬಳಸಬಹುದು ಎಂಬುದುಈ ಔಷಧದ ವಿಶೇಷತೆ. ಆದರೆ ಇತ್ತೀಚೆಗೆ ಔಷಧವನ್ನೇ ಪ್ರತಿರೋಧಿಸುವ ರೋಗಾಣುಗಳು ಪತ್ತೆಯಾಗಿ ಚಿಕಿತ್ಸಾ ಕ್ಷೇತ್ರ ಆತಂಕಗೊಂಡಿತ್ತೆಂದುವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News