×
Ad

ಕಾಸರಗೋಡು : ಮಹಮ್ಮದ್ ರ ಸಮಯಪ್ರಜ್ಞೆಯಿಂದ ತಪ್ಪಿತು ರೈಲು ದುರಂತ

Update: 2016-04-19 23:51 IST

ಕಾಸರಗೋಡು, ಎ.19: ಸಿಪಿಸಿಆರ್‌ಐನ ಸಿಬ್ಬಂದಿಯೋರ್ವರ ಸಮಯ ಪ್ರಜ್ಞೆಯಿಂದಾಗಿ ಕಾಸರಗೋಡು ಸಮೀಪದ ಚೌಕಿ ಎಂಬಲ್ಲಿ ಸಂಭವಿಸ ಬಹುದಾಗಿದ್ದ ರೈಲು ದುರಂತವು ತಪ್ಪಿದೆ. ಸಿಪಿಸಿಆರ್‌ಐನ ತಾತ್ಕಾಲಿಕ ನೌಕರ ಮುಹಮ್ಮದ್ ಎಂಬವರ ಸಮಯ ಪ್ರಜ್ಞೆ ಸಂಭಾವ್ಯ ಅಪಾಯವನ್ನು ತಡೆಗಟ್ಟಿದೆ.

 ಇಂದು ಬೆಳಗ್ಗೆ ಮುಹಮ್ಮದ್ ಇಬ್ಬರು ಮಕ್ಕಳನ್ನು ಮದ್ರಸಕ್ಕೆ ಕರೆದೊಯ್ಯುತ್ತಿದ್ದಾಗ ಚೌಕಿ ಬಳಿ ರೈಲ್ವೆ ಹಳಿ ಬಿರುಕು ಬಿಟ್ಟಿರುವುದು ಕಂಡುಬಂದಿದೆ. ಕೂಡಲೇ ಮನೆಗೆ ಬಂದ ಮುಹಮ್ಮದ್ ಕೆಂಪು ವಸ್ತ್ರವನ್ನು ಹಿಡಿದುಕೊಂಡು ರೈಲು ಆಗಮಿಸುವ ದಿಕ್ಕಿನಲ್ಲಿ ಹಳಿಯ ಉದ್ದಕ್ಕೂ ಓಡಿದ್ದು, ಸುಮಾರು 2 ಕಿ.ಮೀ. ಕ್ರಮಿಸುತ್ತಿದ್ದಂತೆ ತಿರುವನಂತಪುರದಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಮಾವೇಲಿ ಎಕ್ಸೃ್ಪ್ರೆಸ್ ರೈಲು ಬಂದಿದ್ದು, ಕೆಂಪು ವಸ್ತ್ರವನ್ನು ಕಂಡ ರೈಲು ಚಾಲಕ ರೈಲನ್ನು ನಿಲುಗಡೆಗೊಳಿಸಿದ್ದಾನೆ.
ಕೂಡಲೇ ಸ್ಥಳಕ್ಕಾಗಮಿಸಿದ ಕಾಸರಗೋಡು ರೈಲ್ವೆ ವಿಭಾಗದ ಅಧಿಕಾರಿಗಳು ಹಳಿಯನ್ನು ತಾತ್ಕಾಲಿ ಕವಾಗಿ ದುರಸ್ತಿಗೊಳಿಸಿದ್ದು, ಅರ್ಧ ಗಂಟೆಯ ಬಳಿಕ ರೈಲು ಪ್ರಯಾಣ ಮುಂದುವರಿಸಿತು. ಮುಹಮ್ಮದ್‌ರ ಸಮಯಪ್ರಜ್ಞೆಯ ಬಗ್ಗೆ ರೈಲ್ವೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News