ಗಲಭೆ ನಿರತ ಗುಂಪಿನ ಪ್ರತಿಯೊಬ್ಬನೂ ಅಪರಾಧಿ
Update: 2016-04-19 23:54 IST
ಅಹ್ಮದಾಬಾದ್,ಎ.19: ದಂಗೆಯಲ್ಲಿ ತೊಡಗಿರುವ ಗುಂಪಿನ ಪ್ರತಿಯೊಬ್ಬ ಸದಸ್ಯನೂ ತನ್ನ ಸಹಚರರು ನಡೆಸುವ ಅಪರಾಧ ಕೃತ್ಯಗಳಲ್ಲಿ ಪಾಲುದಾರನಾಗಿರುತ್ತಾನೆ ಎಂದು ಅಭಿಪ್ರಾಯಿಸಿರುವ ಗುಜರಾತ್ ಉಚ್ಚ ನ್ಯಾಯಾಲಯವು,ಕೋಮುದಂಗೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದೆ.
2003ರ ಕೋಮುದಂಗೆ ಪ್ರಕರಣವೊಂದರಲ್ಲಿ ಏಳು ದೋಷಿಗಳಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು 10 ವರ್ಷಗಳ ಕಠಿಣ ಶಿಕ್ಷೆಗೆ ತಗ್ಗಿಸಿ ನೀಡಿದ ತೀರ್ಪಿನಲ್ಲಿ ನ್ಯಾಯಮೂರ್ತಿಗಳಾದ ಕೆ.ಎಸ್.ಝವೇರಿ ಮತ್ತು ಜಿ.ಬಿ.ಶಾ ಅವರ ವಿಭಾಗೀಯ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಫೆ.11ರಂದು ನೀಡಿದ್ದ ಈ ತೀರ್ಪನ್ನು ಇತ್ತೀಚಿಗೆ ಉಚ್ಚ ನ್ಯಾಯಾಲಯದ ಅಧಿಕೃತ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲಾಗಿದೆ.